ಮಂಗಳೂರು ಏರ್‌ಪೋರ್ಟ್‌ನಲ್ಲಿ 61 ಲಕ್ಷ ರೂ. ಮೌಲ್ಯದ ಚಿನ್ನ ವಶ: ಇಬ್ಬರು ಸೆರೆ

Update: 2021-02-25 14:34 GMT

ಮಂಗಳೂರು, ಫೆ. 25:  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೆನ್ನಿನ ರಿಫಿಲ್, ಬ್ಯಾಟರಿ ಸಹಿತ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಪ್ರಯಾಣಿಕರನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಕಾಸರಗೋಡು ನಿವಾಸಿಗಳಾದ ಅಬ್ದುಲ್ ರಶೀದ್, ಅಬ್ದುಲ್ ನಿಸ್ಸಾದ್ ಪುಲಿಕುರ್ ಬಂಧಿತ ಆರೋಪಿಗಳು. ಬಂಧಿತರಿಂದ 61.02 ಲಕ್ಷ ಮೌಲ್ಯದ ಒಂದು ಕೆ.ಜಿ. 267 ಗ್ರಾಂ ತೂಕದ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಪ್ರಕರಣ 1: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದರು. ಈ ಪೈಕಿ ಕಾಸರಗೋಡಿನ ಅಬ್ದುಲ್ ನಿಸ್ಸಾದ್ ಪುಲಿಕುರ್ ಎಂಬರನ್ನು ತಪಾಸಣೆ ನಡೆಸಿದಾಗ ಪೆನ್ನಿನ ರಿಫಿಲ್ ಹಾಗೂ ಬ್ಯಾಟರಿಗಳಲ್ಲಿ ಚಿನ್ನ ಇಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದರ ಒಟ್ಟು ತೂಕವು 629.300 ಗ್ರಾಂ ಇದ್ದು, 30.26 ಲಕ್ಷ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ.

ಪ್ರಕರಣ 2: ಇದೇ ರೀತಿ ಅಬ್ದುಲ್ ರಶೀದ್ ಎಂಬವರು ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದು, ಇದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮೂರು ಪ್ಯಾಕೇಟ್‌ಗಳಲ್ಲಿ ಗಮ್ ರೂಪದಲ್ಲಿ ಚಿನ್ನದ ಪುಡಿ ಪತ್ತೆಯಾಗಿದೆ. ಆರೋಪಿಯು ಇದನ್ನು ಪ್ಯಾಂಟ್‌ನಲ್ಲಿಟ್ಟು ಸಾಗಾಟಕ್ಕೆ ಯತ್ನಿಸಿದ್ದು, 638 ಗ್ರಾಂ ತೂಕದ ಚಿನ್ನದ ಮೌಲ್ಯವು 30.75 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News