ಫೆ.26ರಂದು ಎಸೆಸೆಲ್ಸಿ ಗಣಿತ ವಿಷಯದ ಫೋನ್ ಇನ್

Update: 2021-02-25 14:36 GMT

ಉಡುಪಿ, ಫೆ.25: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಎಸೆಸೆಲ್ಸಿ ಗಣಿತ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮವನ್ನು ಫೆ.26ರ ಶುಕ್ರವಾರ ಸಂಜೆ 5 ರಿಂದ ರಾತ್ರಿ 7 ರವರೆಗೆ ಕಾರ್ಕಳದ ಎಸ್.ವಿ.ಟಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳು ಗಣಿತ ವಿಷಯದ ಕಲಿಕಾ ಸಮಸ್ಯೆಗಳ ಬಗ್ಗೆ ಪ್ರಕಾಶ್ ಭಟ್ ಎಂ ಮೊ.ನಂ:8277614690, ಹರೀಶ್ ಶೆಟ್ಟಿ ಮೊ.ನಂ:9902933532, ದಿನೇಶ್ ಶೆಟ್ಟಿಗಾರ್ ಮೊ.ನಂ:9449045697, ಆರ್. ನಾರಾಯಣ ಶೆಣೈ ಮೊ.ನಂ: 9980898232, ಯೋಗೀಂದ್ರ ನಾಯಕ್ ಮೊ.ನಂ: 9900987331, ರಾಜೇಂದ್ರ ಭಟ್ ಮೊ.ನಂ: 9880773581 ಹಾಗೂ ಪರೀಕ್ಷಾ ಸಿದ್ಧತೆ, ಮತ್ತಿತರ ಪ್ರಶ್ನೆಗಳಿಗೆ ಡಿಡಿಪಿಐ ಎನ್. ಎಚ್. ನಾಗೂರ ಮೊ.ನಂ: 9448999353 ಮತ್ತು ಕಾರ್ಕಳ ತಾಲೂಕಿನ ಶೈಕ್ಷಣಿಕ ಸಮಸ್ಯೆಗಳಿಗೆ ಕಾರ್ಕಳ ಬಿಇಓ ಮೊ.ನಂ: 9480695373 ಇವರಿಗೆ ಕರೆ ಮಾಡಿ ಪ್ರಶ್ನೆ ಕೇಳಿ ಪರಿಹಾರ ಪಡೆಯಬಹುದು.

ಪಾಲಕರು, ಸಾರ್ವಜನಿಕರೂ ಸಹ ಕರೆ ಮಾಡಿ ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಡಿಡಿಪಿಐ ನಂಬರ್‌ಗೆ ಕರೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News