ಮನವಳಿಕೆ ಗುತ್ತುನಲ್ಲಿ ಯಕ್ಷಾರಾಧನೆ, ಸಾಧಕರಿಗೆ ಸನ್ಮಾನ

Update: 2021-02-25 14:46 GMT

ಮಂಗಳೂರು, ಫೆ. 25: ಯಕ್ಷಗಾನ ನವರಸ ಪ್ರಧಾನ ಕಲೆ. ಮನುಷ್ಯನಿಗೆ ಯಕ್ಷಗಾನದಿಂದ ನೈಪುಣ್ಯತೆ, ಕೌಶಲ್ಯತೆ ಬರುವುದರ ಜೊತೆಗೆ ಧಾರ್ಮಿಕ ಪ್ರಜ್ಞೆಯನ್ನೂ ಮೂಡಿಸುತ್ತದೆ ಎಂದು ಒಡಿಯೂರು ಶ್ರೀ ಗುರುದೇವ ದತ್ತಸಂಸ್ಥಾನಂ ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಉದ್ಯಮಿ ಹೇಮಂತ್ ರೈ ಮನವಳಿಕೆ ಗುತ್ತು ಅವರು ಪೆರಾಬೆ ಗ್ರಾಮದ ಮನವಳಿಕೆ ಗುತ್ತುವಿನಲ್ಲಿ ಯಕ್ಷಾರಾಧನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ಮನವಳಿಕೆ ಗುತ್ತಿನವರಾದ ವೈದ್ಯಕೀಯ ಸಾಧಕ ಮನವಳಿಕೆ ಡಾ. ಅಭಿಷೇಕ್ ಶೆಟ್ಟಿ, ಏಕಲವ್ಯ ಪ್ರಶಸ್ತಿ ಪುರಷ್ಕೃತ ಮನವಳಿಕೆ ಅಭಿಷೇಕ್ ಎನ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಭಿಷೇಕ್ ಎನ್. ಶೆಟ್ಟಿ ಪರವಾಗಿ ತಂದೆ ಜಗನ್ನಾಥ್ ಶೆಟ್ಟಿ ಮತ್ತು ತಾಯಿ ತುಳಸಿ ಶೆಟ್ಟಿ ಸನ್ಮಾನ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಅಭಿನಂದಿಸಲಾಯಿತು. ನಿತ್ಯಾನಂದ ಶೆಟ್ಟಿ ಮನವಳಿಕೆ, ಸುಭಾಷ್ ರೈ ಮನವಳಿಕೆ ಮತ್ತು ಮನವಳಿಕೆ ಗುತ್ತು ಲಕ್ಷ್ಮಿನಾರಾಯಣ ರೈ ಹರೇಕಳ ಅವರು ಸನ್ಮಾನ ಪತ್ರ ವಾಚಿಸಿದರು. ಯಕ್ಷಧ್ರುವ ಪಟ್ಲ ಪೌಂಡೇಷನ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಶಾಸಕ ಹರೀಶ್ ಪೂಂಜಾ ಮತ್ತು ಉದ್ಯಮಿ ಶಶಿಧರ ಶೆಟ್ಟಿ ಬರೋಡ ಶುಭಹಾರೈಸಿದರು.

ಪುತ್ತೂರು ತಾಲೂಕು ಇಒ ನವೀನ್ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೊಡಗು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಮಡಿಕೇರಿಯ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಹೇಶ್ ಮೋಟಾರ್ಸ್‌ನ ಮಾಲಕರಾದ ಎ.ಕೆ. ಜಯರಾಮ ಶೇಖ, ಮನವಳಿಕೆ ಗುತ್ತಿನ ಯಜಮಾನ ರಮಾನಾಥ ರೈ ಮತ್ತು ವಿಠಲ ರೈ ಮನವಳಿಕೆ ಗುತ್ತು ಉಪಸ್ಥಿತರಿದ್ದರು.

ದಯಾನಂದ ರೈ ಮನವಳಿಕೆ ಗುತ್ತು ಸ್ವಾಗತಿಸಿದರು. ಪ್ರಶಾಂತ್ ರೈ ಮನವಳಿಕೆ ಗುತ್ತು ವಂದಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಅಪೂರ್ವ ಜೆ. ಶೆಟ್ಟಿ ಪ್ರಾರ್ಥಿಸಿದರು, ಮನವಳಿಕೆ ಗುತ್ತಿನ ಗೋಪಾಲಕೃಷ್ಣ ರೈ, ರಾಧಾಕೃಷ್ಣ ರೈ, ಜಯಕುಮಾರ್ ರೈ, ರಾಧಾಕೃಷ್ಣ ರೈ ದೆಹಲಿ, ಸುಧಾಕರ ರೈ, ಪ್ರದೀಪ್ ರೈ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News