ಫೆ. 26ರಂದು 'ಇಹ್ಸಾನ್ ಕರ್ನಾಟಕ' ಸ್ವಾಗತ ಸಮಿತಿ ರಚನೆ; ಎ.ಪಿ. ಉಸ್ತಾದ್ ಮುಖ್ಯ ಅತಿಥಿ
Update: 2021-02-25 20:35 IST
ಮಂಗಳೂರು : 'ಇಹ್ಸಾನ್ ಕರ್ನಾಟಕ' ಇದರ ಸ್ವಾಗತ ಸಮಿತಿ ರಚನಾ ಸಭೆಯು ಮಂಗಳೂರು ಬಲ್ಮಠದಲ್ಲಿರುವ ಸಹೋದಯ ಹಾಲ್‌ನಲ್ಲಿ ಫೆ. 26ರಂದು ಬೆಳಗ್ಗೆ ನಡೆಯಲಿದ್ದು, ಸುಲ್ತಾನುಲ್ ಉಲಮಾ ಎ. ಪಿ.ಉಸ್ತಾದ್ ನೇತೃತ್ವ ವಹಿಸಲಿದ್ದಾರೆ.
ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಲಕ್ಷ್ಯವಾಗಿಟ್ಟು ಕಾರ್ಯಾಚರಿಸುತ್ತಿರುವ ಇಹ್ಸಾನ್ ಕರ್ನಾಟಕ ಸಂಘವು ಹತ್ತು ವರ್ಷಗಳನ್ನು ಪೂರ್ತಿ ಮಾಡಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ವರ್ಷವಾಗಿ ಆಚರಿಸಲು ನಿರ್ಧರಿಸಿದ್ದು, ಮಾರ್ಚ್ ನಿಂದ ಡಿಸೆಂಬರ್ ವರೆಗೆ ಹತ್ತು ಕಾರ್ಯಕ್ರಮಗಳೊಂದಿಗೆ ದಶಮಾನೋತ್ಸವ ನಡೆಯಲಿದೆ.
ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯದ ಸುನ್ನೀ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಇಹ್ಸಾನ್ ಅಧ್ಯಕ್ಷ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದ್ದಾರೆ.