ಫೆ..27: ಜಮೀಯ್ಯತುಲ್ ಫಲಾಹ್ ನಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ, ತರಬೇತಿ ಕಾರ್ಯಕ್ರಮ
Update: 2021-02-26 16:40 IST
ಬಿ.ಸಿ.ರೋಡ್ : ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ ಸಮಾರಂಭ ಹಾಗೂ ತರಬೇತಿ ಕಾರ್ಯಕ್ರಮವು ಫೆ.27ರಂದು ಅಪರಾಹ್ನ 3ಕ್ಕೆ ಮಾರ್ನಬೈಲ್ ನ ಮೆಲ್ಕಾರ್ ಮಹಿಳಾ ಕಾಲೇಜ್ ನಲ್ಲಿ ನಡೆಯಲಿದೆ.
ಸಂಸ್ಥೆಯ ಅಧ್ಯಕ್ಷ ಹಾಜಿ ಎ.ಉಸ್ಮಾನ್ ಕರೋಪಾಡಿ ಅಧ್ಯಕ್ಷತೆ ವಹಿಸಲಿದ್ದು ವಗ್ಗ ಸರಕಾರಿ ಪ.ಪೂ.ಕಾಲೇಜು ಪ್ರಭಾರ ಪ್ರಾಂಶುಪಾಲ ಶಮೀವುಲ್ಲಾ, ಮೆಲ್ಕಾರ್ ಮಹಿಳಾ ಕಾಲೇಜು ಪ್ರಾಂಶುಪಾಲ ಬಿ.ಕೆ.ಅಬ್ದುಲ್ ಲತೀಪ್, ಸಂಸ್ಥೆಯ ಕೋಶಾಧಿಕಾರಿ ಎಫ್.ಎಂ.ಬಶೀರ್ ಫರಂಗಿಪೇಟೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಚಿನ್ನದ ಪದಕ ಪುರಷ್ಕೃತ ಪೊಲೀಸ್ ವೃತ್ತ ನಿರೀಕ್ಷಕರುಗಳಾದ ಟಿ.ಡಿ.ನಾಗರಾಜ್ ಬಂಟ್ವಾಳ, ಮುಹಮ್ಮದ್ ರಫೀಕ್ ಹೈಗ್ರೌಂಡ್ ಪೊಲೀಸ್ ಠಾಣೆ ಬೆಂಗಳೂರು ಹಾಗೂ ಕೋವಿಡ್ ಸೇನಾನಿ ಡಾ. ಎಂ.ಎಂ. ಶರೀಫ್ ಆಲಡ್ಕ ಇವರನ್ನು ಸನ್ಮಾನಿಸಲಾಗುವುದು ಎಂದು ಜಮೀಯ್ಯತುಲ್ ಫಲಾಹ್ ಕಾರ್ಯದರ್ಶಿಎಂ.ಎಚ್. ಇಕ್ಬಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.