ಉಡುಪಿ ಲೆಕ್ಕಪರಿಶೋಧಕರ ಸಂಘಕ್ಕೆ ಕವಿತಾ ಎಂ.ಪೈ ಅಧ್ಯಕ್ಷೆಯಾಗಿ ಆಯ್ಕೆ
Update: 2021-02-26 18:36 IST
ಉಡುಪಿ, ಫೆ.26: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ದ (ಭಾರತ ಲೆಕ್ಕಪರಿಶೋಧಕರ ಸಂಸ್ಥೆ) ಉಡುಪಿ ಶಾಖೆಗೆ ಸಿಎ ಕವಿತಾ ಎಂ. ಪೈ ಟಿ. ಅವರು 2021-22 ನೇ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕವಿತಾ ಪೈ ಅವರು ಸಂಘದ 20ನೇ ಅಧ್ಯಕ್ಷೆಯಾಗಿದ್ದಾರೆ. ಈ ಮೊದಲು ಕವಿತಾ ಪೈ ಅವರು ಸಂಸ್ಥೆಯ ಉಪಾಧ್ಯಕ್ಷೆ, ಕಾರ್ದರ್ಶಿಯಾಗಿ ಹುದ್ದೆ ಗಳನ್ನು ನಿರ್ವಹಿಸಿದ್ದರು. ಸಂಘದ ನೂತನ ಉಪಾಧ್ಯಕ್ಷರಾಗಿ ಸಿಎ. ಲೋಕೇಶ್ ಶೆಟ್ಟಿ,, ಕಾರ್ದರ್ಶಿಯಾಗಿ ಸಿಎ. ಪ್ರದೀಪ್ ಜೋಗಿ, ಖಜಾಂಚಿಯಾಗಿ ಸಿಎ. ಪ್ರಭಾಕರ್ ಎನ್ ನಾಯಕ್, ಸಿಕಾಸಾ ಅಧ್ಯಕ್ಷರಾಗಿ ಸಿಎ. ನರಸಿಂಹ ನಾಯಕ್ ಆಯ್ಕೆ ಆಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.