ಕೋಡಿ: ರಕ್ತದಾನ -ಜನಔಷಧಿ ಕುರಿತ ಮಾಹಿತಿ ಕಾರ್ಯಕ್ರಮ

Update: 2021-02-26 14:46 GMT

ಕುಂದಾಪುರ, ಫೆ.26: ಭಾರತೀಯ ಯುವ ರೆಡ್ ಕ್ರಾಸ್ ಸೊಸೈಟಿ ಹಾಗೂ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಕುಂದಾಪುರ ಇದರ ವತಿಯಿಂದ ರಕ್ತದಾನ ಮತ್ತು ಜನಔಷಧಿ ಕುರಿತ ಮಾಹಿತಿ ಕಾರ್ಯಕ್ರಮವನ್ನು ಶುಕ್ರವಾರ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸ ಲಾಗಿತ್ತು.

ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಜಯಕರ್ ಶೆಟ್ಟಿ, ಖಜಾಂಚಿ ಶಿವರಾಮ್ ಶೆಟ್ಟಿ, ಸಂಯೋಜಕ ಸತ್ಯನಾರಾಯಣ ಪುರಾಣಿಕ್, ಸದಸ ಗಣೇಶ್ ಆಚಾರ್ಯ, ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್, ಪ್ರಾಂಶು ಪಾಲ ಡಾ.ಶಮೀರ್, ವಿದ್ಯಾರ್ಥಿ ಸಂಯೋಜಕ ತನೀಮ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಸೋನಿ ಡಿಕೋಸ್ಟಾ ರಕ್ತದಾನದ ಕುರಿತು ಮತ್ತು ಜಯಕರ ಶೆಟ್ಟಿ ಜನಔಷಧಿಯ ಮಾಹಿತಿಯನ್ನು ವಿದ್ಯಾರ್ಥಿ ಗಳಿಗೆ ನೀಡಿದರು. ವಿದ್ಯಾರ್ಥಿನಿ ತಸ್ಮಿಯಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ರೆಡ್‌ಕ್ರಾಸ್ ಸಂಯೋಜ ಅಹಮ್ಮದ್ ಖಲೀಲ್ ಸ್ವಾಗತಿಸಿದರು. ವಿದ್ಯಾರ್ಥಿ ಶುಹೈದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News