ಉಡುಪಿಯಲ್ಲಿ ಶ್ರೀಲಂಕಾ ಪ್ರಜೆಯ ಅಂತ್ಯಸಂಸ್ಕಾರಕ್ಕೆ ನೆರವು

Update: 2021-02-26 14:48 GMT

ಉಡುಪಿ, ಫೆ. 26: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಶ್ರೀಲಂಕಾ ದೇಶದ ಪ್ರಜೆಯ ಅಂತ್ಯಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಮೃತರ ಸಂಬಂಧಿ ಮುರಳಿಧರನ್ ಹಾಗೂ ಮಗಳು ಸಿಲ್ವಿನ್ ಉಡುಪಿಯ ಸಾಮಾಜಿಕ ಕಾರ್ಯಕರ್ತರ ಸಹಕಾರ ದಿಂದ ಶುಕ್ರವಾರ ನಡೆಸಿದರು.

ಮೃತರು ಶ್ರೀಲಂಕಾದ ಬಾಲನಗೊಚ್ಚ ನಗರದ ಕಬಿಲನ್ ನಟರಾಜನ್ (58) ಎಂದು ಗುರುತಿಸಲಾಗಿದೆ. ಕಳೆದ ನವಂಬರ್ನಿಂದ ಮಲ್ಪೆಯಿಂದ ಮೀನು ರಪ್ತುಗೊಳಿಸುವ ವ್ಯಾಪಾರ ನಡೆಸುತ್ತಿದ್ದ ಇವರು, ಉಡುಪಿಯ ಖಾಸಗಿ ವಸತಿಗೃಹದಲ್ಲಿ ವಾಸವಾಗಿದ್ದರು. ಫೆ.16ರಂದು ಇವರು ಅನಾರೋಗ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ಅಜ್ಜರಕಾಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಶ್ರೀಲಂಕಾದಲ್ಲಿರುವ ಮೃತರ ಸಂಬಂಧಿಕರ ವಿಳಾಸ ಪತ್ತೆ ಹಚ್ಚಿ ವಿಷಯ ಮುಟ್ಟಿಸಲಾಯಿತು. ಎಸ್ಪಿ ಕಚೇರಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ, ಶ್ರೀಲಂಕಾ ದಿಂದ ಆಗಮಿಸಿರುವ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸ ಲಾಯಿತು. ಮೃತದೇಹವನ್ನು ಮಾತೃದೇಶಕ್ಕೆ ಕೊಂಡೈ ಯಲು ಅಸಹಾಯಕತೆ ಎದುರಾದಗ, ಕುಟುಂಬಿಕರು ಭಾರತದಲ್ಲಿ ಶವಸಂಸ್ಕಾರ ನಡೆಸಲು ನಿಶ್ಚಯಿಸಿ ದರು. ಅವರ ಬಯಕೆಯಂತೆ ಸಾಮಾಜಿಕ ಕಾರ್ಯಕರ್ತರು ಅಂತ್ಯಸಂಸ್ಕಾರ ನಡೆಸಲು ಸಹಕರಿಸಿದರು. ಅಂತ್ಯಸಂಸ್ಕಾರದ ನೇರದೃಶ್ಯಗಳ ವಿಕ್ಷಣೆಯನ್ನು ಶ್ರೀಲಂಕಾದಲ್ಲಿದ್ದ ಮೃತರ ಪತ್ನಿ ಮಕ್ಕಳು, ಕುಟುಂಬಿಕರು ವಿಡಿಯೋ ಕರೆಯ ಮೂಲಕ ವಿಕ್ಷಿಸಿದರು.

ಮೃತರ ಕುಟುಂಬಕ್ಕೆ ಸಾಮಾಜಿಕ ಕಾರ್ಯಕರ್ತರಾದ ಹರ್ಷವರ್ಧನ್ ಬ್ರಹ್ಮಾವರ, ಸುದರ್ಶನ್ ಬ್ರಹ್ಮಗಿರಿ, ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಅಣ್ಣಪ್ಪ ಸಂಪಿಗೆನಗರ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News