ಸಿಐಟಿಯುನಿಂದ ಪಾದಯಾತ್ರೆ: ಶಾಸಕರುಗಳಿಗೆ ಮನವಿ ಸಲ್ಲಿಕೆ

Update: 2021-02-26 14:50 GMT

ಕುಂದಾಪುರ, ಫೆ.26 ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ರೈತವಿರೋಧಿ ಕೃಷಿ ಸಂಬಂಧಿತ ತಿದ್ದುಪಡಿ ಮಸೂದೆಗಳು ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಮತ್ತು ಇತರೆ ತಿದ್ದುಪಡಿಗಳನ್ನು ತಿರಸ್ಕರಿಸು ವಂತೆ ಒತ್ತಾಯಿಸಿ ಸಿಐಟಿಯು ಕುಂದಾಪುರ ತಾಲೂಕು ಸಂಚಲನಾ ಸಮಿತಿ ನೇತೃತ್ವದಲ್ಲಿ ಆಟೋ, ಕಟ್ಟಡ, ಹಂಚು, ಬೀಡಿ, ಬಿಸಿಯೂಟ ಕಾರ್ಮಿಕರ ಪಾದಯಾತ್ರೆ ಹಾಗೂ ಶಾಸಕರ ಕಚೇರಿ ಚಲೋ ಕಾರ್ಯಕ್ರಮ ಶುಕ್ರವಾರ ಜರಗಿತು.

ಅದೇ ರೀತಿ ಹಂಚು ಕಟ್ಟಡ ಆಟೋರಿಕ್ಷಾ ಬೀಡಿ, ಬಿಸಿಯೂಟ, ಅಂಗನ ವಾಡಿ, ಮೀನು ಕಾರ್ಮಿಕರು, ಖಾಸಗಿ ಬಸ್ ನೌಕರರ ಬೇಡಿಕೆಗಳ ಈಡೇರಿಸು ವಂತೆ ಹಾಗೂ ಕುಂದಾಪುರ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಭೆಯಲ್ಲಿ ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕ ಎಚ್. ನರಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯುನ ಮುಖಂಡರಾದ ಬಲ್ಕೀಸ್, ಸಂತೋಷ ಹೆಮ್ಮಾಡಿ, ರಿಕ್ಷಾ ಚಾಲಕರ ಮುಖಂಡ ರಾದ ಚಂದ್ರಶೇಖರ ವಿ., ರಾಜುದೇವಾಡಿಗ, ಉಮೇಶ್, ಪಂಜು, ಕೆ.ಲಕ್ಷ್ಮಣ, ರವಿ ವಿ.ಎಂ., ರಮೇಶ್ ಉಪಸ್ಥಿತರಿದ್ದರು.

ಉಡುಪಿಯಲ್ಲೂ ಪಾದಯಾತ್ರೆ: ಸಿಐಟಿಯು ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ ಇಂದು ಉಡುಪಿಯ ಶಾಸಕ ರಘುಪತಿ ಭಟ್ ಕಚೇರಿಗೆ ಪಾದ ಯಾತ್ರೆ ಮೂಲಕ ತೆರಳಿ ಶಾಸಕರ ಅಪ್ತ ಕಾರ್ಯದರ್ಶಿ ಮೂಲಕ ಮನವಿ ಸಲ್ಲಿಸಲಾಯಿತು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಅಂಗನವಾಡಿ ನೌಕರರ ಜಿಲ್ಲಾಧ್ಯಕ್ಷೆ ಭಾರತಿ, ಕಾರ್ಯದರ್ಶಿ ಸುಶೀಲಾ ನಾಡ, ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಸುನಂದಾ, ಉಡುಪಿ ಜಿಲ್ಲಾ ಕಟ್ಟಡ ಸಂಘ ಅಧ್ಯಕ್ಷ ಶೇಖರ್ ಬಂಗೇರ, ದಯಾನಂದ, ಮೀನುಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪೂಜಾರಿ, ಬೀಡಿ ಸಂಘದ ಅಧ್ಯಕ್ಷೆ ನಳಿನಿ, ಮೊಹನ್, ವಿದ್ಯಾರಾಜ್, ಗಣೇಶ ನಾಯ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News