×
Ad

ರಮೇಶ್ ಶೆಟ್ಟಿಗೆ ಜೀವಬೆದರಿಕೆ: ಆರೋಪಿಗಳ ಬಂಧನಕ್ಕೆ ಒತ್ತಾಯ

Update: 2021-02-26 20:49 IST

ಉಡುಪಿ, ಫೆ. 26: ಹಿರಿಯ ಕಾಂಗ್ರೆಸ್ ಮುಖಂಡ, ಗ್ರಾಪಂ ಹಾಲಿ ಸದಸ್ಯ ಎನ್.ರಮೇಶ್ ಶೆಟ್ಟಿ ಕುಕ್ಕೆಹಳ್ಳಿ ಅವರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಕುಕ್ಕೆಹಳ್ಳಿಯಲ್ಲಿರುವ ರಮೇಶ್ ಶೆಟ್ಟಿ ಅವರ ಮನೆಯಲ್ಲಿ ಖಂಡನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ರಮೇಶ್ ಶೆಟ್ಟಿಗೆ ಬೆದರಿಕೆ ಮತ್ತು ಕಾರು, ಮನೆಗೆ ಹಾನಿ ಮಾಡಿ ರುವುದನ್ನು ತೀವ್ರವಾಗಿ ಖಂಡಿಸಲಾಯಿತು. ಆರೋಪಿಗಳನ್ನು ಗೂಂಡಾಕಾಯ್ದೆ ಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಉಡುಪಿ ಜಿಲ್ಲಾಪೊಲೀಸ್ ವರಿಷ್ಠರಿಗೂ ಮನವಿ ನೀಡಿ, ದೂರನ್ನು ಪುನರ್ ಪರಿಶೀಲನೆ ಮಾಡಿ ಬೆದರಿಕೆ ಒಡ್ಡಿದ ಆರೋಪಿಗಳನ್ನು ರಕ್ಷಣೆ ಮಾಡದೆ, ಸೂಕ್ತ ಕಾನೂನು ಆಡಿಯಲ್ಲಿ ಬಂಧನ ಮಾಡಿ ಶಿಕ್ಷೆ ವಿಧಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಮುಖಂಡರಾದ ಜನಾರ್ದನ ತೋನ್ಸೆ, ಪ್ರಖ್ಯಾತ್ ಶೆಟ್ಟಿ, ಭುಜಂಗ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಹರೀಶ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಸದಾಶಿವ ನಾಯ್ಕ್ ಪೂಜಾರಿ, ತಾಜುದ್ದೀನ್, ಜಯ ಶೆಟ್ಟಿ ಬನ್ನಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ, ಶಂಕರ್ ಶೆಟ್ಟಿ, ರತ್ನಾಕರ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News