​ಫೆ.27: ಎಲ್ಲೈಸಿ ವಿಭಾಗೀಯ ಮಹಿಳಾ ಸಮಾವೇಶ

Update: 2021-02-26 15:40 GMT

ಉಡುಪಿ, ಫೆ.26: ಉಡುಪಿ ವಿಭಾಗದ ವಿಮಾ ನೌಕರರ ಸಂಘದ ವತಿಯಿಂದ 20ನೇ ವಿಭಾಗೀಯ ಮಹಿಳಾ ಸಮಾವೇಶ ಫೆ.27ರಂದು ನಗರದ ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಲಿದೆ.

ಬೆಳಗ್ಗೆ 9:30ಕ್ಕೆ ಧ್ವಜಾರೋಹಣದೊಂದಿಗೆ ಸಮಾವೇಶದ ಉದ್ಘಾಟನೆಯನ್ನು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟ ಹೈದರಾಬಾದ್ ಇದರ ಉಪಾಧ್ಯಕ್ಷೆ ಎಸ್.ಕೆ. ಗೀತಾ ನೆರವೇರಿಸಲಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜೀವವಿಮಾ ಕಚೇರಿಗಳಿಂದ ಸಂಘದ ಸದಸ್ಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News