​ಉಡುಪಿ; ಮೂಗಿ-ಕಿವುಡಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 15ವರ್ಷ ಜೈಲು ಶಿಕ್ಷೆ

Update: 2021-02-26 15:59 GMT

ಉಡುಪಿ, ಫೆ. 20: ಮೂಗಿ ಹಾಗೂ ಕಿವುಡಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿ ಹರೀಶ್ (33) ಎಂಬಾತನಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾ ಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು 15ವರ್ಷ ಕಠಿಣ ಜೆಲು ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ.

2018ರ ಡಿಸೆಂಬರ್ ತಿಂಗಳಿನಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತ ತನ್ನ ನೆರೆಮನೆಯ 15 ವರ್ಷದ ಬಾಲಕಿ ಮೇಲೆ ಅತ್ಯಾ ಚಾರ ಎಸಗಿದ್ದನು. ಬಾಲಕಿಗೆ ಮಾತು ಬಾರದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಬಳಿಕ ಗರ್ಭಿಣಿಯಾದ ಈ ಬಾಲಕಿ 2019ರಲ್ಲಿ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದಳು. ಇದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಯನ್ನು ಫೆಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು.

ವಿಚಾರಣೆ ನಡೆಸಿದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶೆ ಯಾದವ್ ವನಮಾಲಾ ಆನಂದರಾವ್ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಫೆ.20ರಂದು ದೋಷಿ ಎಂದು ಆದೇಶಿಸಿ, ಶಿಕ್ಷೆ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ತಿಳಿಸಿದ್ದರು.

ಅದರಂತೆ ಇಂದು ಆರೋಪಿಗೆ ಪೋಕ್ಸೋ ಕಾಯ್ದೆಯಡಿ 15 ವರ್ಷ ಕಠಿಣ ಜೈಲು ಶಿಕ್ಷೆ, 15 ಸಾವಿರ ದಂಡ ವಿಧಿಸಲಾಗಿದೆ. ದಂಡ ಕಟ್ಟದಿದ್ದರೆ ಮತ್ತೆ ಒಂದು ವರ್ಷ ಜೈಲು ವಾಸ ಅನುಭವಿಸಲು ಮತ್ತು 15 ಸಾವಿರ ದಂಡದಲ್ಲಿ ಹತ್ತು ಸಾವಿರ ಸಂತ್ರಸ್ತೆಗೆ 5 ಸಾವಿರ ಸರಕಾರಕ್ಕೆ ನೀಡಲು ಆದೇಶ ನೀಡಲಾಗಿದೆ. ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

ಗರಿಷ್ಠ ಮೊತ್ತ 9 ಲಕ್ಷ ರೂ. ಪರಿಹಾರ

15 ವರ್ಷದ ಸಂತ್ರಸ್ತ ಬಾಲಕಿ ಮೂಗಿ ಹಾಗೂ ಕಿವುಡಿಯಾಗಿದ್ದು ಆಕೆ ಪೋಷಕರ ಪಾಲನೆಯಲ್ಲಿದ್ದು, ಈ ಘಟನೆ ಬಳಿಕ ಆಕೆ ಮಗುವನ್ನು ಕೂಡ ಪೋಷಕರೇ ನೋಡಿಕೊಳ್ಳಬೇಕಾಗಿದೆ. ಸಂತ್ರಸ್ತೆಯ ಬಡ ಕುಟುಂಬ ಜೀವನ ಸಾಗಿಸಲು ಹಾಗೂ ಮುಂದೆ ಮಗುವಿನ ಭವಿಷ್ಯದ ಹಿತದೃಷ್ಟಿ ಯಿಂದ, ಸಂತ್ರಸ್ತೆ ಜೀವನದ ಭದ್ರತೆಗಾಗಿ ಗರಿಷ್ಟ ಪರಿಹಾರವನ್ನು ನೀಡಬೇಕು ಎಂದು ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು. ಅವರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಸಂತ್ರಸ್ತ ಬಾಲಕಿಗೆ ಸರಕಾರ ದಿಂದ 9 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News