ನೀರು ಪೂರೈಕೆ ಆರಂಭಿಸದೇ ಇದ್ದಲ್ಲಿ ತಲಪಾಡಿ ಗ್ರಾಪಂ ಕಚೇರಿಗೆ ಮುತ್ತಿಗೆ : ಡಿವೈಎಫ್ಐ

Update: 2021-02-26 17:31 GMT

ತಲಪಾಡಿ : ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಸಿ ರೋಡ್, ಕೆಸಿ ನಗರ ಮತ್ತಿತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಕಳೆದ ಹಲವು ವರ್ಷಗಳಿಂದ ಫೆಬ್ರವರಿ ತಿಂಗಳಿನಿಂದ ಜೂನ್ ಆರಂಭದವರೆಗೆ ಈ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ನೀರಿನ ವಿತರಣೆ ಆರಂಭವಾಗಿಲ್ಲ. ಇದರಿಂದ ಇಲ್ಲಿನ ನಾಗರೀಕರು ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಪಂಚಾಯತ್ ವತಿಯಿಂದ ಈ ಹಿಂದಿನಂತೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಆರಂಭಿಸಬೇಕು. ಇಲ್ಲದೇ ಇದ್ದಲ್ಲಿ ಸಾರ್ವಜನಿಕರ ಜೊತೆ ಸೇರಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಡಿವೈಎಫ್ಐ ತಲಪಾಡಿ ಘಟಕ ತಿಳಿಸಿದೆ.

ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಅಂತರ್ಜಲ ಬತ್ತುವ ಕಾರಣ ಈ ಪ್ರದೇಶದಲ್ಲಿ ನೀರಿನ ಅಭಾವ ಉಂಟಾಗುತ್ತಿದೆ. ಇಲ್ಲಿ ಬಹುತೇಕ ಮನೆಗಳು ಕುಡಿಯುವ ನೀರಿಗೆ ಬಾವಿಯನ್ನೇ ಅವಲಂಭಿಸಿವೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕೆಲ ಪ್ರಭಾವಿಗಳಿಗೆ ಅವರ ಖಾಸಗಿ ಜಾಗದಲ್ಲಿ ಬೋರ್ ವೆಲ್ ಕೊರೆಯಲು ಪಂಚಾಯತ್ ವತಿಯಿಂದ ಅಕ್ರಮವಾಗಿ ಅನುಮತಿ ನೀಡಲಾಗುತ್ತಿದ್ದು ಇದರಿಂದ ಅಂತರ್ಜಲ ಇನ್ನಷ್ಟು ಬತ್ತುವ ಸಾಧ್ಯತೆ ಇದೆ. ಪಂಚಾಯತ್ ಖಾಸಗಿ ವ್ಯಕ್ತಿಗಳಿಗೆ ಬೋರ್ ವೆಲ್ ಕೊರೆಯಲು ಅನುಮತಿ ಕೊಡುವಾಗ ಅಕ್ಕಪಕ್ಕದ ನಿವಾಸಿಗಳ ನಿರಪೇಕ್ಷಣಾ ಪತ್ರವನ್ನು ಪಡೆದ ನಂತರವೇ ಅನುಮತಿ ನೀಡಬೇಕು ಎಂದು ಡಿವೈಎಫ್ಐ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News