ಹಳೆಯಂಗಡಿ : ನಿವೃತ್ತ ಶಿಕ್ಷಕಿ ದೇವದಾನ ಜಯಮಣಿ ಬೆರ್ನಾಡ್ ನಿಧನ

Update: 2021-02-28 06:05 GMT

ಮುಲ್ಕಿ : ಕೆಪಿಸಿಸಿ ಕೋ- ಆರ್ಡಿನೇಟರ್ ವಸಂತ ಬೆರ್ನಾಡ್ ಅವರ ತಾಯಿ, ದಿ. ರೆವರೆಂಟ್ ಫಾದರ್ ಜಾರ್ಜ್ ಬೆರ್ನಾರ್ಡ್ ಅವರ ಪತ್ನಿ ದೇವದಾನ ಜಯ ಮಣಿ ಬೆರ್ನಾರ್ಡ್ (87) ಅವರು ಶನಿವಾರ ತಮ್ಮ ನಿವಾಸದಲ್ಲಿ ನಿಧನರಾದರು.

ಅವರು ಐವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಹಳೆಯಂಗಡಿಯ ಯುಬಿಎಂಸಿ ಶಾಲೆಯಲ್ಲಿ ಕಳೆದ 43 ವರ್ಷಗಳಿಂದ ಉತ್ತಮ ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸಿ ಜನಮನ್ನಣೆ ಪಡೆದು  ನಿವೃತ್ತಿ ಗೊಂಡಿದ್ದರು.

ಮೃತರ ಅಂತಿಮ‌ ಸಂಸ್ಕಾರ ಮಾರ್ಚ್ 1 ರಂದು ಹಳೆಯಂಗಡಿಯಲ್ಲಿ ನಡಯಲಿದ್ದು, ಅಂದು ಮಧ್ಯಾಹ್ನ 2ಗಂಟೆಯ ವರೆಗೆ ಅವರ ನಿವಾಸದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ.

ಸಂತಾಪ: ದೇವ ದಾನ ಜಯ ಮಣಿ ಬೆರ್ನಾರ್ಡ್ ಅವರ ನಿಧನಕ್ಕೆ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಮಾಜಿ ಸಚಿವ ಅಭಯಚಂದ್ರ ಜೈನ್, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕಿಲ್ಪಾಡಿ ಗ್ರಾ. ಪಂ. ಉಪಾಧ್ಯಕ್ಷ ಗೋಪಿನಾಥ ಪಡಂಗ, ಗೌತಮ್ ಜೈನ್ ಮುಲ್ಕಿ ಅರಮನೆ, ಗುರುರಾಜ ಎಸ್. ಪೂಜಾರಿ ತೋಕೂರು, ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ, ಬಾಲಚಂದ್ರ ಕಾಮತ್, ಮಂಜುನಾಥ ಕಂಬಾರ, ಸಂದೀಪ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಹಳೆಯಂಗಡಿ ಗ್ರಾಪಂ ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಅನಿಲ್ ಸಸಿಹಿತ್ಲು, ಚಂದ್ರಕುಮಾರ್, ಧರ್ಮಾನಂದ ತೋಕೂರು ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News