×
Ad

ಕಡಬ: ದ್ವಿಚಕ್ರ ವಾಹನ ಪಲ್ಟಿ; ಮಹಿಳೆ ಸ್ಥಳದಲ್ಲೇ ಮೃತ್ಯು

Update: 2021-02-28 11:49 IST

ಕಡಬ : ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ ಎನ್ನಲಾದ ಹಂಪ್ ಗೆ ಅಮಾಯಕ ಮಹಿಳೆಯೋರ್ವರು ಬಲಿಯಾಗಿರುವ ಘಟನೆ ರವಿವಾರ ನಡೆದಿದೆ.

ಮೃತ ಮಹಿಳೆಯನ್ನು ವೇಣೂರಿನ ಬಜಾಲು ಸಮೀಪದ ವಿರಂದಲೆ ನಿವಾಸಿ ವೆಂಕಪ್ಪ ಸಾಲ್ಯಾನ್ ಎಂಬವರ ಪತ್ನಿ ಸುಂದರಿ (65) ಎಂದು ಗುರುತಿಸಲಾಗಿದೆ.

ಮೃತ‌ ಮಹಿಳೆಯು ತನ್ನ ಮೊಮ್ಮಗನೊಂದಿಗೆ ಇಂದು ಬೆಳಗ್ಗೆ ವೇಣೂರಿನಿಂದ ಕಡಬಕ್ಕೆಂದು ಹೊರಟಿದ್ದು, ಮಂಜು ಆವರಿಸಿದ್ದರಿಂದ ಹಂಪ್ ಗೋಚರಿಸದೆ ದ್ವಿಚಕ್ರ ವಾಹನ ಪಲ್ಟಿಯಾಗಿದ್ದು, ರಸ್ತೆಗೆಸೆಯಲ್ಪಟ್ಟ ಸುಂದರಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌ ಎಂದು ತಿಳಿದುಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News