ಕರಾವಳಿ ಜಾನಪದ ಜಾತ್ರೆಗೆ ಚಾಲನೆ

Update: 2021-02-28 08:33 GMT

ಮಂಗಳೂರು : ಕರ್ನಾಟಕ ಜನಪದ ಪರಿಷತ್ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರ ಭವನದಲ್ಲಿ ಹಮ್ಮಿಕೊಂಡ ಕರಾವಳಿ ಜನಪದ ಜಾತ್ರೆಯನ್ನು ಕಾಸರ ಗೋಡಿನ ಎಡನೀರುಶ್ರೀ ಸಚ್ಚಿದಾ ನಂದ ಭಾರತಿ ಉದ್ಘಾಟಿಸಿ ಶುಭ ಹಾರೈಸಿದರು.

ಮೆರವಣಿಗೆ ಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ ಉದ್ಘಾಟಿಸಿದರು.

ಸಮಾರಂಭದಲ್ಲಿ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಅಂಗಾರ ಮಾತನಾಡುತ್ತಾ,ಗ್ರಾಮಾಂತರ ಪ್ರದೇಶದಿಂದ ಬಂದ ಜಾನಪದ ಸಂಸ್ಕ್ರತಿ ಇನ್ನೂ ಮುಂದೆ ಯೂ ಉಳಿಯ ಬೇಕಾದರೆ ಈ ಸಂಸ್ಕ್ರತಿ ಯ ಬಗ್ಗೆ ಗೌರವ ಮತ್ತು ಅಭಿಮಾನದೊಂದಿಗೆ ಅದನ್ನು ಮುಂದುವರಿಸುವ ಜನ ಸಮುದಾ ಯ ಬೇಕು ಇಲ್ಲದೆ ಹೋದ ಲ್ಲಿ ಈ ಸಂಸ್ಕ್ರತಿ ಮುಂದುವರಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕರಾವಳಿ ಜಾನಪದ ಜಾತ್ರೆ ಪ್ರಾಮುಖ್ಯತೆ ಪಡೆದಿದೆ ಎಂದು ಶುಭ ಹಾರೈಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ,ದ.ಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ , ವಿಜಯ ಕುಮಾರ್ ಕೊಡಿಯಾಲ ಬೈಲ್ ,ಕರ್ನಾಟಕ ಜನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ, ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕೊಡಿಯಾಲ ಬೈಲ್ , ಮಾಜಿ ಜಿ.ಪಂ‌ಸದಸ್ಯ ಜಗದೀಶ್ ಅಧಿಕಾರಿ ಮಂಗಳೂರು ತಾಲೂಕು ಜಾನಪದ ಪರಿಷತ್  ಘಟಕದ ಅಧ್ಯಕ್ಷ ಮೋಹನ್ ದಾಸ ರೈ ,ಜಿಲ್ಲಾ ಘಟಕದ ಪದಾಧಿಕಾರಿಗಳಾದ ಲಕ್ಷೀಶ್ ಸುವರ್ಣ, ತಾರಾನಾಥ ಶೆಟ್ಟಿ,ಮುಂಬೈ ಘಟಕದ ಅಧ್ಯಕ್ಷ ಡಾ.ಆರ್.ಕೆ.ಶೆಟ್ಟಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ  ವಿಜಯ ಕುಮಾರ್ ಭಂಡಾರಿ, ಮನಪಾ ಸದಸ್ಯ ಭಾಸ್ಕರ ಚಂದ್ರ ಶೆಟ್ಟಿ ,ಚಲನ ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ ಬೈಲ್ ಮೊದಲಾದ ವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಜಾನಪದ ಕಲಾವಿದರಾದ  ಸೇಸಪ್ಪ ಪಂಬದ, ಸಂದೀಪ್ ಆಚಾರ್ಯ ಅವರನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News