ತಲಪಾಡಿ: ಬೃಹತ್ ರಕ್ತದಾನ ಶಿಬಿರ

Update: 2021-02-28 09:27 GMT

ಉಳ್ಳಾಲ : ರಕ್ತದಾನಕ್ಕೆ ಮಹತ್ತರ ಸ್ಥಾನ ಕಲ್ಪಿಸಲಾಗಿದೆ. ಅಗತ್ಯ ಇರುವವರಿಗೆ ರಕ್ತದಾನ ಮಾಡುವುದು ಮಹತ್ತರ ಗುಣವಾಗಿದೆ. ಇದಕ್ಕಿಂತ ಶ್ರೆಷ್ಠ ದಾನ ಬೇರಿಲ್ಲ. ಇದು ಜೀವದಾನ ಆಗಿದೆ ಎಂದು  ಅಬ್ದುಲ್ ರಶೀದ್ ಝೈನಿ ಹೇಳಿದರು.

ಅವರು ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್, ಎಸ್ಸೆಸ್ಸೆಫ್ ತಲಪಾಡಿ ಯುನಿಟ್, ಎಸ್ಸೆಸ್ಸೆಫ್ ಬ್ಲಡ್ ಸಾಯಿಬೋ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ತಲಪಾಡಿ ಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಿಜೆಎಂ ಇಮಾಂ ಹಸನ್ ಜಾಬೀರ್ ಫಾಳಿಲಿ ದುವಾ ನೆರವೇರಿಸಿದರು.ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಕೆ.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ ಯ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ದಲ್ಲಿ ಎಸ್ ವೈ ಎಸ್ ಕೆಸಿರೋಡ್  ಸೆಂಟರ್ ಅಧ್ಯಕ್ಷ ಮುಹಮ್ಮದ್ ಪಿ, ಅಬೂಬಕ್ಕರ್ ತಲಪಾಡಿ, ಹಮೀದ್ ತಲಪಾಡಿ, ಜುನೈದ್ ಸಖಾಫಿ ಬೆಳ್ಮ, ಅನ್ಸಾರ್ ಸ ಅದಿ ಕೋಟೆಕಾರ್, ಅಬ್ದುಲ್ ರಹಿಮಾನ್ ತಲಪಾಡಿ, ಫಾರೂಕ್ ತಲಪಾಡಿ ಉಪಸ್ಥಿತರಿದ್ದರು. ಮುಸ್ತಫಾ ಕೆ.ಸಿ.ರೋಡ್ ಸ್ವಾಗತಿಸಿದರು. ಅಸ್ಗರ್ ತಲಪಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News