ಪರಿಶ್ರಮದಿಂದ ಮಹಿಳೆಯರಿಂದಲೂ ಉದ್ಯಮದಲ್ಲಿ ಸಾಧನೆ: ಉಲ್ಲಾಸ್ ಕಾಮತ್

Update: 2021-02-28 14:26 GMT

ಮಂಗಳೂರು: ಮಹಿಳಾ ಉದ್ಯಮಿಗಳು ಛಲ, ಪರಿಶ್ರದೊಂದಿಗೆ ಶ್ರದ್ಧೆಯಿಂದ ತೊಡಗಿಸಿಕೊಳ್ಳುವುದರಿಂದ ಪುರುಷರಿಗಿಂತ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಿದ್ದಾರೆ. ಮಹಿಳಾ ಉದ್ಯಮಿಗಳು ತಮ್ಮ ಉದ್ಯಮದ ಬಗ್ಗೆ ನಿಖರ ವಿಶ್ವಾಸ ಮತ್ತು ರೂಪುರೇಶೆ ಸಿದ್ಧಪಡಿಸಿ ಸರಕಾರದಿಂದ ಯೋಗ್ಯ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಜ್ಯೋತಿ ಲ್ಯಾಬ್ಸ್ ಇದರ ಸಹ ಆಡಳಿತ ನಿರ್ದೇಶಕ ಉಲ್ಲಾಸ್ ಕಾಮತ್ ತಿಳಿದ್ದಾರೆ. ಅವರು ಫುಜ್ಲಾನ್ ಜಿಪಿಎಲ್ ಉತ್ಸವ 2021 ಇದರ ಎರಡನೇ ದಿನ ಉದ್ಯಮಿಗಳ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಹಿಳಾ ಉದ್ಯಮಿಗಳು ತಮ್ಮ ಉದ್ಯಮದ ಬಗ್ಗೆ ನಿಖರವಾದ ನಿಲುವು ಕಾರ್ಯ ಯೋಜನೆ ಸಿದ್ದಪಡಿಸಿ ಸರಕಾರದ ನೆರವನ್ನು ಪಡೆಯುತ್ತಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಉಲ್ಲಾಸ್ ಕಾಮತ್ ತಿಳಿಸಿದ್ದಾರೆ.

ಸಮಾರಂಭಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಹ್ಯಾಂಗ್ಯೋ ಐಸ್ ಕ್ರೀಂ ಎಂಡಿ ಪ್ರದೀಪ್ ಪೈ, ಪೈ ಸೇಲ್ಸ್ ನ ಗಣಪತಿ ಪೈ, ದುರ್ಗಾ ಲ್ಯಾಬೋರೇಟರಿಸ್ ನ ರಾಜೇಶ್ ಕಿಣಿ, ಮಹೇಶ್ ಕಿಣಿ ಹಾಗೂ ಅನೇಕ ಗಣ್ಯರು ಭಾಗವಹಿಸಿದರು.

ಐದನೇ ವರ್ಷದ ಫುಜ್ಲಾನಾ ಜಿಪಿಎಲ್ ಉತ್ಸವ-2021 ಇದರ ಎರಡನೇ ದಿನ  ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ರಾಜ್ಯ, ರಾಷ್ಟ್ರದ ಒಟ್ಟು 12 ತಂಡಗಳು ಪ್ರತಿಷ್ಟಿತ ಫುಜ್ಲಾನಾ ಟ್ರೋಫಿಗಾಗಿ ಸೆಣಸಾಟ ನಡೆಸುತ್ತಿವೆ.  ಇನ್ನೊಂದು ಅಂಗಣದಲ್ಲಿ ಅರುಣಾ ಮಸಾಲ ಫುಡ್ ಕೋರ್ಟ್ ನಲ್ಲಿ ಆಟಗಾರರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕವಾಗಿ ಕುಳಿತು ವೈವಿಧ್ಯಮಯ ಅಹಾರವನ್ನು ಉಣಬಡಿಸುವ ವ್ಯವಸ್ಥೆ ಮಾಡಲಾಗಿದ್ದು, ಅದೇ ಫುಡ್ ಕೋರ್ಟ್ ನ ಮತ್ತೊಂದು ಭಾಗದಲ್ಲಿ ಆಗಮಿಸುವ ಕ್ರಿಕೆಟ್ ಪ್ರೇಮಿಗಳಿಗೆ, ಅತಿಥಿಗಳಿಗೆ ಹತ್ತು ವಿಶೇಷ ಫುಡ್ ಕೋರ್ಟ್ ನಲ್ಲಿ ಆಹಾರದ ವ್ಯವಸ್ಥೆ ಮಾಡಲಾಗಿತ್ತು.

ಇನ್ನೊಂದೆಡೆ ವಿಶೇಷವಾಗಿ ತಯಾರು ಮಾಡಿರುವ ವೇದಿಕೆಯಲ್ಲಿ ವಿವಿಧ ವಯೋಮಾನದವರಿಗೆ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಕ್ರಿಕೆಟ್ ಮೈದಾನಕ್ಕೆ ತಾಗಿಕೊಂಡಿರುವ ನದಿಯಲ್ಲಿ ಬೋಟಿಂಗ್ ಕೂಡ ಮಾಡಬಹುದಾಗಿದ್ದು, ಮಕ್ಕಳಿಗಾಗಿ ಕಿಡ್ಸ್ ಝೋನ್, ಬಂಗಿ ಜಂಪಿಂಗ್, ಜಯಂಟ್ ವೀಲ್ ಕೂಡ ಆಯೋಜಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News