ಕೆಂಪುಕೋಟೆ ಹಿಂಸಾಚಾರ ಬಿಜೆಪಿ ಯೋಜಿತ ಕೃತ್ಯ: ಅರವಿಂದ ಕೇಜ್ರಿವಾಲ್ ಆರೋಪ

Update: 2021-02-28 15:49 GMT

ಹೊಸದಿಲ್ಲಿ: ಗಣರಾಜ್ಯೋತ್ಸವದ ದಿನ ರೈತರ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಸಂಭವಿಸಿರುವ ಹಿಂಸಾಚಾರವನ್ನು ಬಿಜೆಪಿ ಕಾರ್ಯಕರ್ತರೇ ಯೋಜಿಸಿದ್ದರು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವಿವಾರ ಆರೋಪಿಸಿದ್ದಾರೆ.

ಮೀರತ್ ನಲ್ಲಿ ಕಿಸಾನ್ ಪಂಚಾಯತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಇಡೀ ಕೆಂಪುಕೋಟೆಯ ಘಟನೆಯು ಬಿಜೆಪಿಯಿಂದ ರೂಪಿಸಲ್ಪಟ್ಟಿತ್ತು. ಪ್ರತಿಭಟನಾ ನಿರತ ರೈತರಿಗೆ ದಿಲ್ಲಿಯ ಮಾರ್ಗಗಳು ಗೊತ್ತಿಲ್ಲದಿರುವಾಗ ಬಿಜೆಪಿಯವರೇ ಅವರಿಗೆ  ಉದ್ದೇಶಪೂರ್ವಕವಾಗಿ ತಪ್ಪು ಮಾರ್ಗವನ್ನು ತೋರಿಸಿದರು ಎಂದು ಹಲವರು ನನಗೆ ಹೇಳಿದ್ದಾರೆ. ಕೆಂಪುಕೋಟೆಯಲ್ಲಿ ಧ್ವಜವನ್ನು ಹಾರಿಸಿದವರು ಬಿಜೆಪಿಯ ಕಾರ್ಯಕರ್ತರು ಎಂದು ಕೇಜ್ರಿವಾಲ್ ಆರೋಪಿಸಿದರು.

ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಆರೋಪಿಸಿ ರೈತರ ವಿರುದ್ಧ ಪ್ರಕರಣವನ್ನು ದಾಖಲಿಸಿರುವ ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕೇಜ್ರಿವಾಲ್, ಬ್ರಿಟಿಷರಿಗೆ ಸಹ ಇಷ್ಟು ಧೈರ್ಯವಿರಲಿಲ್ಲ. ಅವರು(ಬಿಜೆಪಿ) ನಮ್ಮ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಬ್ರಿಟಿಷರು ಸಹ ನಮ್ಮ ರೈತರನ್ನು ಈ ಮಟ್ಟಿಗೆ ದಬ್ಬಾಳಿಕೆ ನಡೆಸಿರಲಿಲ್ಲ. ಈ ಸರಕಾರ ಬ್ರಿಟಿಷರನ್ನು ಮೀರಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News