ಬೀಡಿ ಕೈಗಾರಿಕೆಗಳನ್ನು ಉಳಿಸಲು ಹೋರಾಟ ಅಗತ್ಯ: ಜೆ.ಬಾಲಕೃಷ್ಣ ಶೆಟ್ಟಿ

Update: 2021-02-28 16:01 GMT

ಉಡುಪಿ, ಫೆ.28: ಬೀಡಿ ಕಾರ್ಮಿಕರ ಸಮಸ್ಯೆ ಸಾಕಷ್ಟು ಇದೆ. ಇದರಲ್ಲಿ ಜೀವನ ನಡೆಸಲು ಸಾಧ್ಯ ಇಲ್ಲದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆದರೂ ಇಂದಿಗೂ ಲಕ್ಷಾಂತರ ಮಂದಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಆದುದರಿಂದ ಬೀಡಿ ಕೈಗಾರಿಕೆಗಳನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಬೀಡಿ ಫೇಡರೆಶನ್ ರಾಜ್ಯಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಉಡುಪಿಯ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ನಡೆದ ಬೀಡಿ ಎಂಡ್ ಟೊಬೆಕೋ ಲೇಬರ್ ಯುನಿಯನ್ ಮತ್ತು ಮಲ್ಪೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ಜಂಟಿ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬೀಡಿ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನು ದೇಶದ ಎಲ್ಲ ಕಡೆ ಇನ್ನೂ ಜಾರಿಗೆ ಬಂದಿಲ್ಲ. ಆದುದರಿಂದ ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ಕೂಲಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಬೀಡಿ ಕಾರ್ಮಿಕರಿಗೆ ನೀಡ ಬೇಕಾದ ತುಟ್ಟಿಭತ್ಯೆ ಇನ್ನು ಬಾಕಿ ಇದೆ. ಈ ವಿಚಾರ ನ್ಯಾಯಾಲಯದಲ್ಲಿ ಇನ್ನು ತೀರ್ಮಾನ ಆಗಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಬೀಡಿ ಫೇಡರೆಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್, ಉಪಾಧ್ಯಕ್ಷ ಪಿ.ವಿಶ್ವನಾಥ ರೈ, ಜನರಲ್ ವರ್ಕಸ್ ಯುನಿಯನ್ ಅಧ್ಯಕ್ಷ ಶಶಿಧರ್ ಗೊಲ್ಲ, ಸಿಐಟಿಯು ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಬೀಡಿ ಸಂಘದ ಸುಂದರಿ, ಜೋತಿ, ಸುಂಗಧಿ, ರತ್ನ ಉಪಸ್ಥಿತರಿದ್ದರು.

ಉಮೇಶ್ ಕುಂದರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಳಿನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News