ರೈಲು ಢಿಕ್ಕಿ: ಅಪರಿಚಿತ ಮೃತ್ಯು
Update: 2021-02-28 22:23 IST
ಬ್ರಹ್ಮಾವರ, ಫೆ.28: ಚಲಿಸುತ್ತಿದ್ದ ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.27ರಂದು ಮಧ್ಯಾಹ್ನ ವೇಳೆ ಉಪ್ಪೂರು ಗ್ರಾಮದ ಉಗ್ಗೇಲ್ಬೆಟ್ಟು ಎಂಬಲ್ಲಿ ನಡೆದಿದೆ.
ಬಾರ್ಕೂರಿನಿಂದ ಉಡುಪಿಗೆ ಹೋಗುವ ರೈಲ್ವೇ ಹಳಿಯ ಬದಿಯಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟ ಸುಮಾರು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.