ಕಾಜೂರು ಉರೂಸ್ ಮುಬಾರಕ್: ಸರ್ವಧರ್ಮೀಯರ ಸೌಹಾರ್ದ ಸಮ್ಮೇಳನ

Update: 2021-02-28 18:10 GMT

ಬೆಳ್ತಂಗಡಿ, ಫೆ.28: ಕಾಜೂರು ದರ್ಗಾ ಶರೀಫ್ ಉರೂಸ್ ಮುಬಾರಕ್ ಅಂಗವಾಗಿ ರವಿವಾರ ಸರ್ವಧರ್ಮೀಯರ ಸೌಹಾರ್ದ ಸಮ್ಮೇಳನ ನಡೆಯಿತು.

ಕರ್ನಾಟಕ ಮುಸ್ಲಿಮ್ ಜಮಾತಿನ ಪ್ರಧಾನ ಕಾರ್ಯದರ್ಶಿ, ರಾಜ್ಯ ವಕ್ಪ್ ಮಂಡಳಿ ಸದಸ್ಯ ಕೆ.ಎಂ.ಶಾಫಿ ಸಅದಿ ಮಾತನಾಡಿ, ಜಗತ್ತಿನಲ್ಲಿ ಯಾವ ಧರ್ಮವೂ ಭಯ, ಧ್ವೇಷವನ್ನು ಕಲಿಸಿಲ್ಲ ಎಲ್ಲರೂ ಕರುಣೆ ಪ್ರೀತಿಯನ್ನು ತೋರಲು ಹೇಳಿದ್ದಾರೆ. ಧರ್ಮವನ್ನು ಅರಿತು ಅನುಸರಿಸುವುದು ಇಂದು ಜಗತ್ತಿನ ಅಗತ್ಯವಾಗಿದೆ ಎಂದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಜೋಸ್ ವಲಿಯಪರಂಬಿಲ್ ಮಾತನಾಡಿ, ಜಗತ್ತಿನೆಲ್ಲೆಡೆ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಿರಾತಂಕವಾಗಿ ನಡೆದಾಗ ಜಗತ್ತಿಗೆ ಒಳಿತಾಗಲು ಸಾಧ್ಯ . ಪ್ರತಿಯೊಬ್ಬ ಮನುಷ್ಯನ ಮುಖದಲ್ಲಿ ದೇವರನ್ನು ಕಾಣುವಂತಾಗಬೇಕು ಆಗ ಎಲ್ಲಿಯೂ ಅಸಹಿಷ್ಣುತೆ ಇರದು ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಾಮಾಜಿಕ ಸಾಮರಸ್ಯಕ್ಕೆ ಶಕ್ತಿ ತುಂಬುವ ಕೆಲಸ ನಡೆಯಬೇಕಾದ ಅಗತ್ಯವಿದೆ. ಮತೀಯ ವಿಚಾರಧಾರೆಗಳನ್ನು ಇಟ್ಟುಕೊಂಡು ಅದಕ್ಕಾಗಿ ಧರ್ಮವನ್ನು ಉಪಯೋಗಿಸುವ ಪ್ರವೃತ್ತಿ ಮಾರಕವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದದರು. ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ಕೆ.ವಸಂತ ಬಂಗೇರ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಸೈಯದ್ ಕೆ.ಪಿ.ಎಸ್. ಝೈನುಲ್ ಅಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ವಹಿಸಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತ ಪಡೆದ ಶಿಕ್ಷಕ ಕೊಯ್ಯೂರು ಯಾಕೂಬ್‌ರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದ.ಕ. ಜಿಲ್ಲಾ ವಕ್ಪ್ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು, ಬಿ.ಎಚ್.ಖಾದರ್ ಬಂಟ್ವಾಳ, ಅಬ್ದುಲ್ ಮುನೀರ್ ಬೆಂಗಳೂರು, ಅಮಾನುಲ್ಲಾ ಮಂಗಳೂರು, ಜಿ.ಮುಹಮ್ಮದ ಹನೀಫ್ ಮಂಗಳೂರು, ಲಕ್ಷ್ಮಣ ಗೌಡ ಬಂಗಾಡಿ, ಕಾಸಿಂ ಮಲ್ಲಿಗೆ ಮನೆ ಹಾಗೂ ಇತರರು ಇದ್ದರು.

ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹೀಂ ಸ್ವಾಗತಿಸಿದರು. ಅಶ್ರಫ್ ಅಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News