ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದ ಪ್ರಧಾನಿ ಮೋದಿ

Update: 2021-03-01 04:32 GMT
ಫೋಟೊ ಕೃಪೆ: twitter @narendramodi

ಹೊಸದಿಲ್ಲಿ, ಮಾ.1: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ರಾಜಧಾನಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಪಡೆದುಕೊಂಡಿದ್ದಾರೆ. ಪುದುಚ್ಚೇರಿ ಮೂಲದ ದಾದಿ ಪಿ.ನಿವೇದಾ ಅವರು ಪ್ರಧಾನಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಿದರು.

‘‘ಇಂದು ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಏಮ್ಸ್‌ನಲ್ಲಿ ಪಡೆದುಕೊಂಡಿದ್ದೇನೆ. ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟಕ್ಕೆ ಇನ್ನಷ್ಟು ಬಲ ನೀಡಲು ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ಪಡುತ್ತಿರುವ ಶ್ರಮ ಸ್ತುತ್ಯಾರ್ಹ. ಜತೆಯಾಗಿ ನಾವು ಭಾರತವನ್ನು ಕೋವಿಡ್-19 ಮುಕ್ತಗೊಳಿಸೋಣ’’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ, ಜತೆಗೆ ತಾವು ಕೋವಿಡ್ ಲಸಿಕೆ ಪಡೆಯುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.

ಇಂದು ಮುಂಜಾನೆ ಏಮ್ಸ್‌ಗೆ ಆಗಮಿಸಿದ ಪ್ರಧಾನಿ ಅಸ್ಸಾಮಿನ ಸಾಂಪ್ರದಾಯಕ ‘ಗಮೋಚ’ ಕೂಡ ಧರಿಸಿದ್ದರು. ರಾಜ್ಯದ ಮಹಿಳೆಯರ ಆಶೀರ್ವಾದದ ಸಂಕೇತ ಈ ಗಮೋಚ ಎಂಬ ನಂಬಿಕೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News