ತೊಕ್ಕೊಟ್ಟು: ‘ದೋಸಾ ಪಾಯಿಂಟ್’ ಶುಭಾರಂಭ

Update: 2021-03-01 09:08 GMT

ಉಳ್ಳಾಲ, ಮಾ.1: ತೊಕ್ಕೊಟ್ಟು ಜಂಕ್ಷನ್ ಬಳಿಯ ಸನ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ‘ದೋಸ ಪಾಯಿಂಟ್’ ರೆಸ್ಟೋರೆಂಟ್ ಸಮೂಹ ಸಂಸ್ಥೆ ಸೋಮವಾರ ಶುಭಾರಂಭಗೊಂಡಿತು.

 ‘ದೋಸಾ ಪಾಯಿಂಟ್’ ಅನ್ನು ಉದ್ಘಾಟಿಸಿದ ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಯಹ್ಯಾ ತಂಙಳ್ ಮದನಿ ಮಾತನಾಡಿ, ತೊಕ್ಕೊಟ್ಟುವಿನಲ್ಲಿ ಒಳ್ಳೆಯ ಆಹಾರ ವಿಭಾಗಗಳನ್ನು ತೆರೆಯಲಾಗಿದೆ. ಜನರಿಗೆ ಇಷ್ಟವಾದ ಅತ್ಯುತ್ತಮ ಆಹಾರ ಒದಗಿಸುವ ಉದ್ದೇಶದಿಂದ ಆರಂಭಿಸಿದ ದೋಸ ಪಾಯಿಂಟ್ ಯಶಸ್ವಿಯಾಗಿಲಿ ಎಂದು ಹಾರೈಸಿದರು.

‘ದೋಸಾ ಪಾಯಿಂಟ್’ ಆರು ವಿಭಾಗಗಳನ್ನು ಒಳಗೊಂಡಿದೆ. ಈ ಪೈಕಿ ‘ತಂದೂರ್ ಸ್ಟ್ರೀಟ್’ ನ್ನು ಉಳ್ಳಾಲದ ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಉದ್ಘಾಟಿಸಿದರೆ, ‘ಚಾಯ್ ವಾಲಾ’ವನ್ನು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ‘ಡೋಂಗ್ರಿ ಸ್ಟ್ರೀಟ್’ ನ್ನು ಪೆರ್ಮನ್ನೂರ್ ಚರ್ಚ್ ನ ಧರ್ಮಗುರು ಫಾ.ರೂಪೇಶ್ ಮಾಡ್ತಾ, ‘ಫುಡ್ ನೆಸ್ಟ್’ ಅನ್ನು ಕಡಂಬಾರ್  ಜುಮಾ ಮಸೀದಿಯ ಮುದರ್ರಿಸ್ ಎಂ.ಪಿ.ಮುಹಮ್ಮದ್ ಸಅದಿ ಹಾಗೂ ‘ಪಿಝ್ಝಾರಿಯ’ವನ್ನು ಮಸ್ಜಿದುಲ್ ಹುದಾ ಇದರ ಖತೀಬ್ ಮುಹಮ್ಮದ್ ಕುಂಞಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ವೈವಿಧ್ಯಮಯ ಖಾದ್ಯಪ್ರಿಯರಿಗೆ ದೋಸ ಪಾಯಿಂಟ್ ಉತ್ತಮ ಆಯ್ಕೆಯಾಗಿದೆ. ಹನೀಫ್ ರ ನೇತೃತ್ವದಲ್ಲಿ ನಡೆಯುವ ಈ ಉದ್ಯಮ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.

ಫಾ.ರೂಪೇಶ್ ಮಾಡ್ತಾ ಮಾತನಾಡಿ, ಧರ್ಮಕ್ಕಿಂತ ಮಿಗಿಲಾಗಿ ಮನುಷ್ಯತ್ವ ಇದೆ. ವ್ಯವಹಾರಕ್ಕಿಂತ ಮಿಗಿಲಾಗಿ ಆಧ್ಯಾತ್ಮಿಕ ಇದೆ. ಒಟ್ಟಿನಲ್ಲಿ ಇದೊಂದು ಪಿಕ್ ನಿಕ್ ಕೇಂದ್ರ ಆಗಿದೆ ಎಂದರೂ ತಪ್ಪಾಗಲಾರದು. ‘ದೋಸಾ ಪಾಯಿಂಟ್’ ಯಶಸ್ವಿಯಾಗಲಿ ಎಂದು ಹಾರೈಸಿದರು.

ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ರಾಝೀಕ್ ಉಳ್ಳಾಲ, ಯುವ ಉದ್ಯಮಿ ನಾಸಿರ್ ಅಹ್ಮದ್ ಸಾಮಣಿಗೆ,   ಜಮಾಅತ್ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಅಬ್ದುಲ್ ಬಶೀರ್, ದೋಸಾ ಪಾಯಿಂಟ್ ಮಾಲಕರಾದ ಹನೀಫ್, ಯು.ಎಚ್.ಹಸೈನಾರ್ ಉಪಸ್ಥಿತರಿದ್ದರು.

  ಮುಝಮ್ಮಿಲ್ ಅಹ್ಮದ್ ಕಿರಾಅತ್ ಪಠಿಸಿದರು. ವಿದ್ಯಾಧರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

‘ದೋಸಾ ಪಾಯಿಂಟ್’ ಶುಭಾರಂಭದ ಪ್ರಯುಕ್ತ ಇಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News