ಮಾ.14ರಂದು ತುಳು ಭಾವಗೀತೆ ಸ್ಪರ್ಧೆ

Update: 2021-03-01 11:06 GMT

ಉಡುಪಿ, ಮಾ.1: ಉಡುಪಿ ತುಳುಕೂಟ ವತಿಯಿಂದ ತುಳುಕವಿ ದಿ. ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ-2021 ಮಾ.14ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.

6 ವರ್ಷದಿಂದ 14 ವರ್ಷದವರೆಗಿನವರಿಗೆ ಜೂನಿಯರ್ ವಿಭಾಗ, 15 ವರ್ಷ ಮೇಲ್ಪಟ್ಟು ಎಲ್ಲ ವಯೋಮಾನದವರಿಗೆ ಸೀನಿಯರ್ ವಿಭಾಗದಲ್ಲಿ ಸ್ಫರ್ಧೆ ನಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಯಾವುದೇ ಸಂಗೀತ ವಾದ್ಯ ಪರಿಕರಗಳನ್ನು ಬಳಸದೆ 3 ನಿಮಿಷದ ತುಳುಭಾವಗೀತೆ ಹಾಡಬೇಕು.

ಹಿರಿಯ, ಕಿರಿಯ ತುಳು ಸಾಹಿತಿಗಳ ರಚನೆ ಮತ್ತು ಸ್ವರಚಿತ ತುಳು ಭಾವಗೀತೆಗಳಿಗೆ ಆದ್ಯತೆ. ಭಾವಗೀತೆಯ ನಕಲು ಪ್ರತಿಗಳನ್ನು ಸ್ಪರ್ಧೆಯ ದಿನ ಸಂಘಟಕರಿಗೆ ನೀಡುವುದು ಕಡ್ಡಾಯ. ಪ್ರತೀ ವಿಭಾಗದಲ್ಲಿ ಪ್ರಥಮ 2,000 ರೂ. ನಗದು, ಪ್ರಶಸ್ತಿ ಫಲಕ, ದ್ವಿತೀಯ 1500ರೂ. ನಗದು, ಪ್ರಶಸ್ತಿಫಲಕ, ತೃತೀಯ 1,000 ರೂ. ನಗದು, ಪ್ರಶಸ್ತಿ ಫಲಕ ನೀಡಲಾಗುವುದು.

ಸ್ಪರ್ಧಿಗಳು ಮಾ.10ರೊಳಗೆ ಹೆಸರು ನೋಂದಾಯಿಸಲು ಮೊ.ಸಂಖ್ಯೆ: 9964019229, 9740656695, 9880825626ಕ್ಕೆ ಕರೆ ಅಥವಾ ವಾಟ್ಸಾಪ್ ಮಾಡಬಹುದು ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News