ಮೂಡಲಪಾಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹ

Update: 2021-03-01 13:17 GMT

ಉಡುಪಿ, ಮಾ.1: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2021-22 ನೇ ಸಾಲಿನಲ್ಲಿ ಮೂಡಲಪಾಯ ವಿಶ್ವಕೋಶವನ್ನು ಹೊರುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಕಾರ್ಯೋನ್ಮುಖವಾಗಿದೆ.

ಮೂಡಲಪಾಯ ಯಕ್ಷಗಾನ ಬಗ್ಗೆ ಮುಂದಿನ ಪೀಳಿಗೆ ಅಧ್ಯಯನ ಮಾಡಲು ಅನುಕೂಲವಾಗುವಂತೆ ವಿವಿಧ ತಜ್ಞರಿಂದ ಈಗಾಗಲೇ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭವಾಗಿದ್ದು, ಮೂಡಲಪಾಯ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನ, ಛಾಯಾಚಿತ್ರ, ಬಣ್ಣದ ಚಿತ್ರ, ಹಸ್ತಪ್ರತಿಗಳು, ಛಂದಸ್ಸು, ಕಾವ್ಯದ ಸೌಂದರ್ಯ, ಬಣ್ಣಗಾರಿಕೆ, ಪಾತ್ರಗಳ ವೈಶಿಷ್ಟ್ಯತೆ, ಗೆಜ್ಜೆಪೂಜೆ, ಯಕ್ಷಗಾನ ಕೇಂದ್ರಗಳು, ಭಾಗವತರ ವಿವರ, ಕಲಾವಿದರ ವಿವರ, ವಾದ್ಯಗಳ ವಿವರ, ವೇಷ-ಭೂಷಣಗಳ ವಿವರ ಮೂಡಲಪಾಯದ ತಾಳಗಳ ಬಗ್ಗೆ, ಹೆಜ್ಜೆ ಗುರುತುಗಳು, ಮುಂತಾದ ಮೂಡಲಪಾಯ ಕ್ಷೇತ್ರಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ಈ ಬಗ್ಗೆ ಯಾರಿಗಾದರೂ ಮಾಹಿತಿಗಳಿದ್ದಲ್ಲಿ ಅಕಾಡೆಮಿಯ ಇ-ಮೇಲ್ ವಿಳಾಸ -kybabangalore@gmail.com - ಅಥವಾ ಕೊರಿಯರ್/ಪೋಸ್ಟ್ ಮೂಲಕ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಮಾಹಿತಿ ಕಳುಹಿಸುವಂತೆ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News