ಟ್ರಾನ್ಸಿಟ್ 1 ಮಾಲ್‌ನಲ್ಲಿ ‘ಮೆಡೋಕ್ ವಿಶನ್ ಕೇರ್’ ಉದ್ಘಾಟನೆ

Update: 2021-03-01 16:05 GMT

ಮಂಗಳೂರು, ಮಾ.1:  ತೊಕ್ಕೊಟ್ಟು ಸಮೀಪದಲ್ಲಿರುವ ಟ್ರಾನ್ಸಿಟ್ 1 ಮಾಲ್‌ನಲ್ಲಿ ತೆರೆಯಲಾದ ‘ಮೆಡೋಕ್ ವಿಶನ್ ಕೇರ್’ನ ಉದ್ಘಾಟನೆಯು ರವಿವಾರ ನಡೆಯಿತು.

ಖ್ಯಾತ ವೈದ್ಯ ಡಾ. ಸುಬ್ರಹ್ಮಣ್ಯ ಭಟ್ ‘ಮೆಡೋಕ್ ವಿಶನ್ ಕೇರ್’ನ್ನು ಉದ್ಘಾಟಿಸಿದರು. ಈ ಸಂದರ್ಭ ಪಾಲುದಾರರಾದ ಡಾ. ಝಿರಾರ್ ಅಬ್ದುಲ್ಲಾ, ಫೈಝಲ್ ಮುಹಮ್ಮದ್, ಇರ್ಶಾದ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ 20 ವರ್ಷಗಳಿಂದ ಕೇರಳ ಮತ್ತು ಕರ್ನಾಟಕದ 10ಕ್ಕೂ ಅಧಿಕ ಕಡೆ ‘ಮೆಡೋಕ್ ವಿಶನ್ ಕೇರ್’ನ ಶಾಖೆಗಳು ತೆರೆಯಲ್ಪಟ್ಟಿವೆ. ದೃಷ್ಟಿ ದೋಷ ನಿವಾರಣೆ ಮತ್ತು ಕಣ್ಣಿನ ದೃಷ್ಟಿ ಉತ್ಕೃಷ್ಟ ಸಲಕರಣೆಗಳನ್ನು ಹೊಂದಿರುವ ‘ಮೆಡೋಕ್ ವಿಶನ್ ಕೇರ್’ ಗ್ರಾಹಕರಿಗೆ ಸಂತೃಪ್ತಿಯ ಸೇವೆಯನ್ನು ನೀಡುತ್ತಿವೆ. ಪ್ರಸಕ್ತ ಈ ಮಳಿಗೆಯಲ್ಲಿ ಪ್ರಮುಖ ಬ್ರಾಂಡ್‌ಗಳ ಕನ್ನಡಕಗಳು ಮಿತದರದಲ್ಲಿ ಲಭ್ಯವಿದೆ. ತೊಕ್ಕೊಟ್ಟು ಅಲ್ಲದೆ ಸುಳ್ಯ,ಪುತ್ತೂರು, ಸುರತ್ಕಲ್‌ನಲ್ಲೂ ಶೀಘ್ರ ಮಳಿಗೆಯನ್ನು ತೆರೆಯಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News