ಮಾ.2: ಮೆರಿಟೈಮ್ ಇಂಡಿಯಾ ಸಮಿಟ್ ಸಭೆ

Update: 2021-03-01 16:44 GMT

ಮಂಗಳೂರು, ಮಾ.1: ಮೆರಿಟೈಮ್ ಇಂಡಿಯಾ ಸಮಿಟ್-2021 ಇದರ ವರ್ಚುವಲ್ ಸಭೆಯು ಮಾ.2ರಂದು ಮಧ್ಯಾಹ್ನ 12:30ಕ್ಕೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.

ಈ ಸಭೆಯಲ್ಲಿ ಭಾರತೀಯ ನೌಕಾ ಕ್ಷೇತ್ರದಲ್ಲಿ ಲಭ್ಯವಿರುವ ಔದ್ಯೋಗಿಕ ಅವಕಾಶಗಳು ಹಾಗೂ ಆತ್ಮ ನಿರ್ಭರ ಭಾರತದ ನಿರ್ಮಾಣದ ಬಗ್ಗೆ ಚರ್ಚಿಸಲಾಗುವುದು. ದೇಶಿಯ ಮತ್ತು ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆದಾರರು, ನೌಕಾ ಕ್ಷೇತ್ರದ ಮಾಲಕರು, ತಂತ್ರಜ್ಞಾನದ ಪರಿಣಿತರು, ನೀತಿ ಯೋಜಕರು, ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರದ ಪ್ರತಿನಿಧಿಗಳು ಹಾಗೂ 40ಕ್ಕಿಂತ ಹೆಚ್ಚು ಸಹಭಾಗಿತ್ವ ದೇಶಗಳ ಪ್ರತಿನಿಧಿಗ ಸಹಿತ ಸುಮಾರು 1 ಲಕ್ಷ ಮಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News