ಭ್ರಷ್ಟಾಚಾರ ಪ್ರಕರಣ: ಫ್ರಾನ್ಸ್‌ನ ಮಾಜಿ ಅಧ್ಯಕ್ಷರಿಗೆ 3 ವರ್ಷ ಜೈಲು

Update: 2021-03-01 17:38 GMT

ಪ್ಯಾರಿಸ್ (ಫ್ರಾನ್ಸ್), ಮಾ. 1: ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೋಝಿ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತಾಗಿದೆ ಎಂದು ದೇಶದ ನ್ಯಾಯಾಲಯವೊಂದು ಸೋಮವಾರ ಘೋಷಿಸಿದೆ ಹಾಗೂ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮೂರು ವರ್ಷಗಳ ಶಿಕ್ಷೆಯ ಪೈಕಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಲಾಗಿದೆ. ಅಂದರೆ, ಈ ಅವಧಿಯಲ್ಲಿ ಅವರು ಜೈಲಿಗೆ ಹೋಗುವ ಸಾಧ್ಯತೆಯಿಲ್ಲ.

ಶಿಕ್ಷೆಯ ವಿರುದ್ಧ ಅವರು ಮೇಲ್ಮನವಿ ಸಲ್ಲಿಸುವುದು ಖಚಿತವಾಗಿದೆ ಹಾಗೂ ಅವರ ವಿರುದ್ಧ ಬಂಧನಾದೇಶ ಹೊರಡಿಸಲಾಗಿಲ್ಲ. ಹಾಗಾಗಿ, ಅವರು ಜೈಲಿಗೆ ಹೋಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ನನ್ನ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಹಾದಿ ತಪ್ಪಿಸಿದರೆ, ಯುರೋಪ್‌ನಲ್ಲಿರುವ ಮೊನಾಕೊ ದೇಶದಲ್ಲಿ ನಿಮಗೆ ಉನ್ನತ ಹುದ್ದೆಯನ್ನು ದೊರಕಿಸಿ ಕೊಡುತ್ತೇನೆ ಎಂಬ ಆಮಿಷವನ್ನು ಸರ್ಕೋಝಿ ನ್ಯಾಯಾಧೀಶರೊಬ್ಬರಿಗೆ ಒಡ್ಡಿದ್ದರು ಎಂಬುದಾಗಿ ಆರೋಪಿಸಲಾಗಿದೆ.

66 ವರ್ಷದ ಸರ್ಕೋಝಿ 2007ರಿಂದ 2012ರವರೆಗೆ ಫ್ರಾನ್ಸ್ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News