ಕಾಸರಗೋಡು: ಪೆರಿಯ ಕೇಂದ್ರೀಯ ವಿವಿ ಸ್ಥಾಪನಾ ದಿನಾಚರಣೆ

Update: 2021-03-02 10:57 GMT

ಕಾಸರಗೋಡು, ಮಾ.2: ಪ್ರತಿ ಮನುಷ್ಯನಲ್ಲೂ ದಿವ್ಯತೆ ಅಳವಡಗೊಂಡಿದೆ ಎಂಬ ದರ್ಶನವನ್ನು ಭಾರತೀಯ ಸಂಸ್ಕಾರ ಹೊಂದಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅಭಿಪ್ರಾಯಪಟ್ಟರು.

ಕಾಸರಗೋಡು ಜಿಲ್ಲೆಯ ಪೆರಿಯ ಕೇಂದ್ರ ಕೇಂದ್ರೀಯ ವಿವಿಯಲ್ಲಿ ಮಂಗಳವಾರ ಜರುಗಿದ 12ನೇ ಸ್ಥಾಪನಾ ದಿನಾಚರಣೆ ಉಪನ್ಯಾಸ ನಡೆಸಿ, ನೀಲಗಿರಿ ಅತಿಥಿಗೃಹ ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸೇತರ ಕಾಲಾವಧಿಯ ಮಿಸಪೊಟೋಮಿಯಾ, ಈಜಿಪ್ಟಿಯನ್, ಗ್ರೀಕ್ ಸಂಸ್ಕೃತಿಗಳಲ್ಲಿ ಬಹುತೇಕ ವಿಚಾರಗಳು ಇಂದಿಗೂ ಚಾರಿತ್ರಿಕ ಸಂಶೋಧಕರಿಗೆ, ಪುರಾತನ ವಸ್ತು ಸಂಶೋಧಕರಿಗೆ ಅಧ್ಯಯನ ವಿಷಯ ಮಾತ್ರವಾಗಿದೆ. ಆದರೆ ಭಾರತೀಯ ಸಂಸ್ಕೃತಿ ಚೈತನ್ಯದಾಯಕ ವಾಗಿ ಇಂದಿಗೂ ಮುಂದುವರಿಯುತ್ತಿದೆ ಇದಕ್ಕೆ ಕಾರಣ ಅದರಲ್ಲಿರುವ ಆಧಾತ್ಮಿಕ ಶಕ್ತಿ ಎಂದವರು ವಿವರಿಸಿದರು.

ಕೇಂದ್ರ ವಿದೇಶಾಂಗ ಸಹಸಚಿವ ವಿ.ಮುರಳೀಧರನ್ ಉಪಸ್ಥಿತರಿದ್ದರು. ಅಕಾಡೆಮಿಕ್ ಡೀನ್ ಪ್ರೊ.ಕೆ.ಪಿ.ಸುರೇಶ್ ವರದಿ ವಾಚಿಸಿದರು. ಉಪಕುಲಪತಿ ಪ್ರೊ.ಎಚ್. ವೆಂಕಟೇಶ್ವರಲು ಸ್ವಾಗತಿಸಿದರು. ರೆಜಿಸ್ತಾರ್ ಡಾ.ಎಂ.ಮುರಳೀಧರನ್ ನಂಬ್ಯಾರ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News