ದಿ.ಗ್ರೇಸಿ ಮಾರ್ಟಿಸ್‌ರ ಕುರಿತ ಕೊಂಕಣಿ ಪುಸ್ತಕ ಬಿಡುಗಡೆ
Update: 2021-03-02 19:17 IST
ಉಡುಪಿ, ಮಾ.2: ಉಡುಪಿ ಜಿಲ್ಲಾ ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಸಂಘಟನೆ ವತಿಯಿಂದ ಕೊಂಕಣಿ ಸಾಹಿತಿ ಡಾ.ಜೆರಾಲ್ಡ್ ಪಿಂಟೋ ಸಂಪಾದಕತ್ವದಲ್ಲಿ ‘ದಿ.ಗ್ರೇಸಿ ಮಾರ್ಟಿಸ್ ಶಂಕರಪುರ ಅವರ ಕವನಂ ಮತ್ತು ಲೇಖನಾಂ’ ಪುಸ್ತಕದ ಬಿಡುಗಡೆ ಸಮಾರಂಭವು ಇತ್ತೀಚೆಗೆ ಉಡುಪಿ ಚರ್ಚ್‌ನ ಡೊನ್ ಬೋಸ್ಕೊ ಸಭಾಭವನದಲ್ಲಿ ಜರಗಿತು.
ಪುಸ್ತಕವನ್ನು ಉಡುಪಿ ಇಗರ್ಜಿಯ ಸಂತ ವಿನ್ಸೆಂಟ್ ಪೌಲ್ ಸಭೆಯ ಅಧ್ಯಕ್ಷ ಹಾಗೂ ಕಲ್ಯಾಣಪುರ ಓಜನಾಮ್ ವೃದ್ಧಾಶ್ರಮದ ಟ್ರಸ್ಟಿ ಮ್ಯಾಕ್ಸಿಂ ಡಿಸೋಜ ಬಿಡುಗಡೆಗೊಳಿಸಿದರು. ಡಾ.ಜೆರಾಲ್ಜ್ ಪಿಂಟೋ ದಿ.ಗ್ರೇಸಿ ಮಾರ್ಟಿಸ್ ಅವರ ಸಾಹಿತ್ಯ ಹಾಗೂ ಪುಸ್ತಕದ ಪರಿಚಯ ಮಾಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲುವಿಸ್ ಡಿ ಆಲ್ಮೇಡಾ ಸ್ವಾಗತಿಸಿದರು. ಕಾರ್ಯ ದರ್ಶಿ ರೋಚಿ ಬಾರೆಟ್ಟೊ ವಂದಿಸಿದರು. ಕೋಶಾಧಿಕಾರಿ ಆಲ್ಫೋನ್ಸ್ ಡಿಕೋಸ್ತ ಕಾರ್ಯಕ್ರಮ ನಿರೂಪಿಸಿದರು.