×
Ad

ಮಾ.7ರಂದು ‘ಶ್ರೀಜನಾರ್ದನ ಮಂಟಪ’ ಉದ್ಘಾಟನೆ

Update: 2021-03-02 19:20 IST

ಉಡುಪಿ, ಮಾ.2: ಅಂಬಲಪಾಡಿಯ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯು ಸ್ವಂತ ನಿವೇಶನದಲ್ಲಿ ನೂತನವಾಗಿ ನಿರ್ಮಿಸಿದ ಕಛೇರಿ ಸಹಿತ ‘ಶ್ರೀಜನಾರ್ದನ ಮಂಟಪ’ದ ಉದ್ಘಾಟನಾ ಸಮಾರಂಭವು ಅಂಬಲ ಪಾಡಿಯ ಕಂಬ್ಳಕಟ್ಟದಲ್ಲಿ ಮಾ.7ರಂದು ಸಂಜೆ 5ಗಂಟೆಗೆ ಜರಗಲಿದೆ.

ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡವನ್ನು ನಾಡೋಜ ಡಾ.ಜಿ.ಶಂಕರ್‌ರ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ ವಿಜಯ ಬಲ್ಲಾಳರು ಉದ್ಘಾಟಿಸಲಿರುವರು. ಬಳಿಕ ಪ್ರಶಸ್ತ ಪ್ರದಾನ ಮತ್ತು ಮಂಡಳಿಯ ಕಲಾವಿದರಿಂದ ಶ್ವೇತಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News