ಎ.11: ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ
Update: 2021-03-02 20:29 IST
ಮಂಗಳೂರು, ಮಾ.2: ‘ಪೇರೂರು ತುಳು ಅರ ಆಜರಿವು ನಿಲೆ’ ವತಿಯಿಂದ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಉರ್ವಸ್ಟೋರಿನಲ್ಲಿರುವ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಭಾಂಗಣದಲ್ಲಿ ಎ.11ರಂದು ನಡೆಯಲಿದೆ.
ಕಾರ್ಕಳದ ರವಿಶಂಕರ್ ಶಾಲೆಯ ಅನಿತಾ ಮತ್ತು ಬೈಂದೂರು ಸಂದೀಪನ್ ಶಾಲೆಯ ದೇವಕಿ ಟೀಚರ್ ಪ್ರಶಸ್ತಿ ಪಡೆಯುವರು ಎಂದು ಪೇರೂರು ಜಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.