×
Ad

ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂಗ್ ಲೀಗ್‌ಗೆ ಆಯ್ಕೆ

Update: 2021-03-02 20:31 IST

ಮಂಗಳೂರು, ಮಾ.2: ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಅಡ್‌ಹಾಕ್ ಸಮಿತಿಯ ಅಧ್ಯಕ್ಷರಾಗಿ ಹಿರಿಯ ವಕೀಲ ಸುಲೈಮಾನ್ ಎಸ್.ಆಯ್ಕೆಯಾಗಿದ್ದಾರೆ.

ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿಯ ಅಧ್ಯಕ್ಷತೆಯಲ್ಲಿ ಮಂಗಳವಾರ ಮುಸ್ಲಿಂ ಲೀಗ್‌ನ ವಾರ್ಷಿಕ ಮಹಾಸಭೆಯ ಜರುಗಿ ನೂತನ ಅಡ್‌ಹಾಕ್ ಸಮಿತಿಯನ್ನು ರಚಿಸಲಾಯಿತು. ಅಲ್ಲದೆ ಸದಸ್ಯತನ ನೋಂದಣಿ ಮಾಡಿ ಪೂರ್ಣಪ್ರಮಾಣದ ಕಮಿಟಿಯನ್ನು ಪುನರ್ರಚಿಸಲು ನೂತನ ಸಮಿತಿಗೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಸುಲೈಮಾನ್ ದ.ಕ.ಜಿಲ್ಲೆಯಲ್ಲಿ ಸಂವಿಧಾನದತ್ತ ಅಧಿಕಾರವನ್ನು ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಶೋಷಿತ ವರ್ಗದವರಿಗೆ ನೀಡಲು ಜನಾಂದೋಲನ ಮಾಡಬೇಕಿದೆ. ಮೀಸಲಾತಿ ಕುರಿತಂತೆ ರಾಜ್ಯದಲ್ಲಿ ನಡೆಯುವ ಹೋರಾಟವು ಅರ್ಹರ ಪ್ರಾತಿನಿಧ್ಯವನ್ನು ಕಸಿಯುವ ಪ್ರಯತ್ನವಾಗಿದೆ ಎಂದರು.

ಮುಸ್ಲಿಂ ಲೀಗ್ ಅಡ್‌ಹಾಕ್ ಸಮಿತಿಯ ಸಂಚಾಲಕರಾಗಿ ಎಎಸ್‌ಇ ಕರೀಂ ಕಡಬ, ಸದಸ್ಯರಾಗಿ ಸೈಯದ್ ಅಹ್ಮದ್ ಭಾಷಾ ತಂಙಳ್, ಉಸ್ಮಾನ್ ಅಬ್ದುಲ್ಲಾ ಸೂರಿಂಜೆ, ಕೆಎಂ ಫಯಾಝ್, ಕತರ್ ಇಬ್ರಾಹೀಂ ಹಾಜಿ ಸುಳ್ಯ, ಶರೀಫ್ ಬಿಸಿ ರೋಡ್, ಇಶ್ರಾರ್ ಗೂಡಿನಬಳಿ, ನೌಶಾದ್ ಮಲಾರ್, ಮುಹಮ್ಮದ್ ಸಾಲ್ಹಿ ಬೆಂಗರೆ, ರಿಯಾಝ್ ಹರೇಕಳ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News