×
Ad

ಉಡುಪಿ : 326 ಮಂದಿ ಹಿರಿಯರಿಂದ ಲಸಿಕೆ ಸ್ವೀಕಾರ

Update: 2021-03-02 21:22 IST

ಉಡುಪಿ, ಮಾ.2: ಜಿಲ್ಲೆಯ ಒಟ್ಟು 326 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮಂಗಳವಾರ ಕೋವಿಡ್-19 ವಿರುದ್ಧವಿರುವ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಅದೇ ರೀತಿ 45ರಿಂದ 59ವರ್ಷ ದೊಳಗಿನ ಅನ್ಯ ರೋಗದಿಂದ ನರಳುವ ಐವರು ಸಹ ಇಂದು ಈ ಲಸಿಕೆಯನ್ನು ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 385 ಮಂದಿ ಹಿರಿಯ ನಾಗರಿಕರು ಮತ್ತು ಏಳು ಮಂದಿ ಅನ್ಯರೋಗವಿರುವ 45-59 ವಯೋಮಾನದವರು ಮೂರನೇ ಹಂತದಲ್ಲಿ ದೇಶಾದ್ಯಂತ ನೀಡಲಾಗುತ್ತಿರುವ ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಂಡರು ಎಂದವರು ಹೇಳಿದರು.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 385 ಮಂದಿ ಹಿರಿಯ ನಾಗರಿಕರು ಮತ್ತು ಏಳು ಮಂದಿ ಅನ್ಯರೋಗವಿರುವ 45-59 ವಯೋಮಾನದವರು ಮೂರನೇ ಹಂತದಲ್ಲಿ ದೇಶಾದ್ಯಂತ ನೀಡಲಾಗುತ್ತಿರುವ ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಂಡರು ಎಂದವರು ಹೇಳಿದರು. ಉಳಿದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಒಟ್ಟು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇಂದು 21 ಮಂದಿ ಮೊದಲ ಡೋಸ್‌ನ್ನು (ಒಟ್ಟು 17,697-ಶೇ.74) ಪಡೆದರೆ, 23 ಮಂದಿ ಎರಡನೇ ಡೋಸ್‌ನ್ನು (ಒಟ್ಟು 9070-ಶೇ.38)ಸ್ವೀಕರಿಸಿದರು.

ಎರಡನೇ ಹಂತದಲ್ಲಿ ಲಸಿಕೆಯನ್ನು ಪಡೆಯುತ್ತಿರುವ ಜಿಲ್ಲೆಯ ಒಟ್ಟು 4283 ಮಂದಿ ಮುಂಚೂಣಿ ಕಾರ್ಯಕರ್ತರ ಪೈಕಿ ಇಂದು 28 ಮಂದಿ ಮೊದಲ ಡೋಸ್ ಪಡೆದಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 3138 (ಶೇ.73) ಆಗಿದೆ ಎಂದು ಡಾ.ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News