ದ.ಕ.ಜಿಲ್ಲೆಯಲ್ಲಿ 172 ಮಂದಿ ಕೊರೋನ ಲಸಿಕೆ ಸ್ವೀಕಾರ
Update: 2021-03-02 21:23 IST
ಮಂಗಳೂರು, ಮಾ.2: ಮೂರನೇ ಹಂತದ ಕೊರೋನ ಲಸಿಕೆ ಅಭಿಯಾನದ ಎರಡನೇ ದಿನವಾದ ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 172 ಮಂದಿ ಹಿರಿಯ ನಾಗರಿಕರು ಲಸಿಕೆ ಪಡೆದುಕೊಂಡಿದ್ದಾರೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕಾ ಅಭಿಯಾನ ನಡೆಯಿತು. ವೆನ್ಲಾಕ್ ಆಸ್ಪತ್ರೆಯಲ್ಲಿ 92 ಮಂದಿಗೆ ಲಸಿಕೆ ನೀಡಲಾಯಿತು.
ಬುಧವಾರ ಈ ಐದು ಆಸ್ಪತ್ರೆಗಳಲ್ಲದೆ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆ ಮುಲ್ಕಿ ಮತ್ತು ಮೂಡುಬಿದಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ 8 ಕಡೆಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.