ಮಳಲಿ ಪೇಟೆ ದರ್ಗಾ ಉರೂಸ್ ಸಮಾರಂಭ
ಮಂಗಳೂರು, ಮಾ.2: ತೆಂಕುಳಿಪಾಡಿ ಗ್ರಾಮದ ಮಳಲಿ ಪೇಟೆಯ 500ಕ್ಕೂ ಅಧಿಕ ವರ್ಷಗಳ ಇತಿಹಾಸವಿರು ಮಳಲಿ ಜುಮಾ ಮಸೀದಿಯ ವಠಾರದಲ್ಲಿರುವ ಅಸ್ಸೈಯದ್ ಅಬ್ದುಲ್ಲಾಲ್ ಮದನಿಯ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ, ಸ್ವಲಾತ್ ವಾರ್ಷಿಕ, ಮಜ್ಲಿಸುನ್ನೂರ್ ವಾರ್ಷಿಕ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಜಮಾಅತ್‌ನ ಹಿರಿಯರಾದ ಮುಹಮ್ಮದ್ ಅಬ್ದುಲ್ ಖಾದರ್ ಧ್ವಜಾರೋಹಣಗೈದರು. ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಉರೂಸ್ ಸಮಾರಂಭ ಉದ್ಘಾಟಿಸಿದರು.ಮಸೀದಿಯ ಖತೀಬ್ ಝುಬೈರ್ ಫೈಝಿ ಅಂಕೋಲ ಸಂದೇಶ ನೀಡಿದರು.
ಕೇರಳ ತಾನೂರಿನ ಅಸ್ಸೈಯದ್ ಫಕ್ರುದ್ದೀನ್ ಅಲ್ ಅಹ್ಸನಿ ತಂಙಳ್ ಸ್ವಲಾತ್ ವಾರ್ಷಿಕದ ನೇತೃತ್ವ ವಹಿಸಿ ಆಶಿರ್ವಚನ ನೀಡಿದರು.
ಮೇಲ್ಪರಂಬ ಮಸೀದಿಯ ಖತೀಬ್ ಅಶ್ರಫ್ ರಹ್ಮಾನಿ ಚೌಕಿ ಧಾರ್ಮಿಕ ಪ್ರವಚನ ನೀಡಿದರು. ಅತಿಥಿಗಳಾಗಿ ಹಾಜಿ ಎಂ.ಎಚ್ ಮುಹಿಯ್ಯುದ್ದೀನ್, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಜಮಾಲುದ್ದೀನ್ ದಾರಿಮಿ, ಹಾಜಿ ಎಂ.ಮಾಮು, ಯು.ಪಿ ಇಬ್ರಾಹೀಂ, ಅಬ್ದುಲ್ ಹಮೀದ್, ಆರ್.ಎಸ್. ಝಾಕಿರ್, ಅಬ್ದುಲ್ ರಝಾಕ್, ಸರ್ಫ್‌ರಾಝ್, ಇಬ್ರಾಹೀಂ, ಉಮರುಲ್ ಫಾರೂಕ್ ಫೈಝಿ, ಅಬ್ದುಲ್ ರಝಾಕ್ ನದ್ವಿ, ಅಬ್ದುಲ್ ಅಝೀಝ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಸಖಾಫಿ, ಅಬೂಬಕ್ಕರ್ ಸಿದ್ಧೀಕ್ ಹನೀಫಿ, ಹಂಝ ಲತೀಫಿ, ಎಂಎ ಮುಹಮ್ಮದ್ ಭಾಗವಹಿಸಿದ್ದರು.
ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಮಜ್ಲಿಸುನ್ನೂರು ವಾರ್ಷಿಕದ ನೇತೃತ್ವ ವಹಿಸಿದ್ದರು. ಮಸೀದಿಯ ಅಧ್ಯಕ್ಷ ಮಾಮು ಮಣೇಲ್‌ರ ಅಧ್ಯಕ್ಷತೆಯಲ್ಲಿ ಉರೂಸ್ ಸಮಾರೋಪ ನಡೆಯಿತು. ಬೊಳ್ಳೂರು ಮಸೀದಿಯ ಖತೀಬ್ ಶೈಖುನಾ ಅಲ್‌ಹಾಜ್ ಅಝ್ಹರ್ ಫೈಝಿ ದುಆಗೈದರು. ಅದ್ಭುತ ಬಾಲಕ ಸ್ವಾಲಿಹ್ ಬತ್ತೇರಿ ಮುಖ್ಯ ಮತಪ್ರಭಾಷಣಗೈದರು.
ಮಾಜಿ ಶಾಸಕ ಮೊಯ್ದಿನ್ ಬಾವ ಮುಖ್ಯ ಅತಿಥಿಯಾಗಿದ್ದರು. ಕೊರೋನ ಸಂದರ್ಭ ಸೇವೆಗೈದ ಡಾ.ಸಿದ್ದೀಕ್‌ರನ್ನು ಸನ್ಮಾನಿಸಲಾಯಿತು. ಅಬ್ದುಲ್ ಅಝೀಝ್ ಸ್ವಾಗತಿಸಿ, ವಂದಿಸಿದರು. ಮಸೀದಿ ಪುನರ್ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಸರ್ಫ್ರಾಝ್ ಕಾರ್ಯಕ್ರಮ ನಿರೂಪಿಸಿದರು.