ಆಳ್ವಾಸ್ ವಿದ್ಯಾರ್ಥಿಗೆ 2020-21 ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿ

Update: 2021-03-02 17:28 GMT

ಮೂಡುಬಿದಿರೆ: ಧಾರವಾಡದ ಕರ್ನಾಟಕ ಬಾಲವಿಕಾಸ ಆಕಾಡೆಮಿಯ 2020-21 ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಯನ್ನು ಆಳ್ವಾಸ್ ವಿದ್ಯಾರ್ಥಿ ಅಥರ್ವ ಹೆಗ್ಡೆ ಪಡೆದುಕೊಂಡಿದ್ದಾರೆ. 

ಮೂಡುಬಿದಿರೆಯ ಡಾ/ಪ್ರಸನ್ನ ಹೆಗ್ಡೆ-ಶ್ರೇಯಾ ದಂಪತಿ ಪುತ್ರನಾಗಿರುವ ಅಥರ್ವ ಹೆಗ್ಡೆ  ಆಳ್ವಾಸ್ ಸಿ.ಬಿ.ಎಸ್.ಸಿ. ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ.  ಚಿತ್ರಕಲೆ, ಸಾಹಿತ್ಯ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ವಿಜ್ಞಾನ, ಅಬಕಾಸ್, ಸ್ಪೆಲ್‍ಬಿ, ಕ್ಲೇ ಮಾಡೆಲಿಂಗ್ ಮುಂತಾದ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News