ಮಾ.5 ರಿಂದ ಪೇರಡ್ಕದಲ್ಲಿ ಉರೂಸ್ ಸಮಾರಂಭ

Update: 2021-03-02 17:33 GMT

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ - ಪೇರಡ್ಕದ ವಲಿಯುಲ್ಲಾಹಿ ದರ್ಗಾ ಶರೀಫ್ ವಠಾರದಲ್ಲಿ ಉರೂಸ್ ಸಂಭ್ರಮ ಮಾ.5 ರಂದು ಆರಂಭಗೊಳ್ಳಲಿದ್ದು, ಮಾ.7 ರಂದು ಸರ್ವಧರ್ಮ ಸಮ್ಮೇಳನ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಪೇರಡ್ಕ  ಎಂ.ಜೆ.ಎಂ. ಗೌರವಾಧ್ಯಕ್ಷ ಟಿ.ಎಂ.ಶಹೀದ್ ಹೇಳಿದರು.

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದಲ್ಲಿ ವಿವರ ನೀಡಿದರು. ಮಾ.4 ರಂದು ಮಸೀದಿಯಲ್ಲಿ ಮಾಸಿಕ ಸ್ವಲಾತ್ ನಡೆಯುವುದು. ಮಾ.5 ರಂದು ಮಸೀದಿಯ ಅಧ್ಯಕ್ಷ ಎಸ್.ಆಲಿಹಾಜಿ ಧ್ವಜಾರೋಹಣ ಮಾಡಲಿದ್ದಾರೆ. ಅಂದು ರಾತ್ರಿ ನಡೆಯುವ ಕಾರ್ಯಕ್ರಮ ದಲ್ಲಿ ದಾರಿ ತಪ್ಪುವ ಯುವಕ ಯುವತಿಯರು ಎಂಬ ವಿಷಯದಲ್ಲಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ವಳಚ್ಚಿಲ್ ಭಾಷಣ ಮಾಡಲಿದ್ದಾರೆ. ಮಾ. 6 ರಂದು ರಾತ್ರಿ ನಡೆಯುವ ಕಾರ್ಯಕ್ರಮ ದಲ್ಲಿ ಕುಟುಂಬ ಜೀವನ ಎಂಬ ವಿಷಯದಲ್ಲಿ ಯಹ್ ಯಾ ಬಾಖವಿ ಫುಝಕ್ಕರ ಪ್ರಭಾಷಣ ಮಾಡಲಿ ದ್ದಾರೆ. ಮಾ.7 ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ಮಾಡಲಿ ದ್ದಾರೆ. ಟಿ.ಎಂ. ಶಹೀದ್ ರ ಅಧ್ಯಕ್ಷ ತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ಉದ್ಘಾಟನೆ ನೆರವೇರಿಸುವರು. ಮೂರು ದಿನದ ಕಾರ್ಯಕ್ರಮದಲ್ಲಿ ಯೂ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ಸರ್ವಧರ್ಮ ಸಮ್ಮೇಳನ ದ ಬಳಿಕ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸೈಯ್ಯದ್ ಝೈನುಲ್ ಅಬಿದೀನ್ ತಂಙಲ್ ದುಗಲಡ್ಕ ದುವಾ ನೇತೃತ್ವ ವಹಿಸುವರು. ಪಾಣತ್ತೂರು ಖತೀಬ್ ಔಲಿಯಾಗಳು ಮತ್ತು ಕರಾಮತ್ತುಗಳು ಎಂಬ ವಿಚಾರದಲ್ಲಿ ಉಪನ್ಯಾಸ ನೀಡುವರು. ಮೂರು ದಿನದ ಕಾರ್ಯಕ್ರಮ ದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಹೀದ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರ.ಕಾರ್ಯದರ್ಶಿ ಟಿ.ಎಂ. ಅಬ್ದುಲ್ ರಝಾಕ್ ಹಾಜಿ, ಸಾಜಿದ್ ಅಲ್ ಅಸರಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಜುನೈದ್, ಸಫ್ವಾನ್ ದರ್ಖಾಸ್ತು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News