×
Ad

ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಎಸ್ಡಿಪಿಐಯಿಂದ ಮನವಿ

Update: 2021-03-02 23:07 IST

ಮಂಗಳೂರು : ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲ, ಉಚ್ಚಿಲ ಗುಡ್ಡೆ, ಮೇರಳ ಗುಡ್ಡೆ, ಕಾಟಂಗರೆ ಗುಡ್ಡೆ, ನೇತಾಜಿ ರಸ್ತೆ, ಕುದ್ರು, ಕೆಳಗಿನ ತಲಪಾಡಿ, ಹೊಯ್ಗೆ ಜಾರ, ಕೊಳಂಗರೆ ಪ್ರದೇಶದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ￰ಸೋಮೇಶ್ವರ ಪುರಸಭಾ ಸಮಿತಿ ವತಿಯಿಂದ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ವಾಣಿ ವಿ ಆಳ್ವ ಹಾಗೂ ಅಧಿಕಾರಿ ಕೃಷ್ಣ ಇವರಿಗೆ ಮನವಿ ಸಲ್ಲಿಸಲಾಯಿತು.

ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದ್ದು ಜನ ನೀರಿಗಾಗಿ ಪರದಾಟ ನಡೆಸುವಂತಾಗಿದೆ ಅಲ್ಲದೆ  ದೈನಂದಿನ ಕೆಲಸ ಬಿಟ್ಟು ನೀರಿಗಾಗಿ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಲಾಯಿತು.

ಮನವಿಯನ್ನು ಪರಿ‌ಶೀಲಿಸಿದ ಮುಖ್ಯಾಧಿಕಾರಿ ವಾಣಿ ವಿ ಆಳ್ವರವರು ಶೀಘ್ರದಲ್ಲೇ ಪರಿಶೀಲನೆಗಾಗಿ ಜೆ.ಇ ಹಾಗೂ ನಿಯೋಗವನ್ನು ಆಯಾ ಪ್ರದೇಶಕ್ಕೆ ಕಳುಹಿಸಿ ಕೊಡಲಾಗುವುದು ಅಲ್ಲದೆ ನೀರಿನ ಸಮಸ್ಯೆಯನ್ನು ಬಗೆಹರಿಸುವ ‌ಭರವಸೆಯನ್ನು ನೀಡಿದರು.

ನಿಯೋಗದಲ್ಲಿ ಎಸ್ಡಿಪಿಐ ಸೋಮೆಶ್ವರ ಅಧ್ಯಕ್ಷರಾದ ಮೊಯಿದಿನ್ ಕುಟ್ಟಿ , ಕಾರ್ಯದರ್ಶಿ ಅಬ್ದುಲ್ ನಝೀರ್ ಯು.ಜಿ., ಎಸ್ಡಿಪಿಐ ಮುಖಂಡರಾದ ಅಬ್ದುಲ್ ಮಜೀದ್ ಉಚ್ಚಿಲ್, ಮಹ್ಮೂದ್ ತಲಪಾಡಿ, ಇಲ್ಯಾಸ್ ತಲಪಾಡಿ, ಅಬ್ದುಲ್ ಅಝೀಝ್ ಉಚ್ಚಿಲ ಗುಡ್ಡೆ, ಸಿದ್ದೀಕ್ ಉಚ್ಚಿಲ್, ಸಿರಾಜ್ ಉಚ್ಚಿಲ್, ಸವಾದ್ ಉಚ್ಚಿಲ್, ಅಬ್ದುಲ್ ಕರೀಂ ಉಚ್ಚಿಲ ಗುಡ್ಡೆ, ಸಿದ್ದೀಕ್ ಉಚ್ಚಿಲ ಗುಡ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News