ದ.ಕ. ಜಿಲ್ಲೆ: 19 ಮಂದಿಗೆ ಕೊರೋನ ಪಾಸಿಟಿವ್
Update: 2021-03-04 22:49 IST
ಮಂಗಳೂರು, ಮಾ. 4: ದ.ಕ. ಜಿಲ್ಲೆಯಲ್ಲಿ ಗುರುವಾರ 19 ಮಂದಿಯಲ್ಲಿ ಕೊರೋನ ಪಾಸಿಟಿವ್ ಧೃಢಪಡುವುದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 34,506 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ.
ಗುರುವಾರ 10 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೆ 33,561 ಮಂದಿ ಕೊರೋನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 205 ಸಕ್ರಿಯ ಪ್ರಕರಣವಿದೆ. ಈವರೆಗೆ ಕೊರೋನ ಸೋಂಕಿಗೆ ಜಿಲ್ಲೆಯಲ್ಲಿ 740ಮಂದಿ ಮೃತಪಟ್ಟಿದ್ದಾರೆ.