ಮಾ.7ರಂದು ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನಿಮಾ ಬಿಡುಗಡೆ

Update: 2021-03-05 15:06 GMT

ಉಡುಪಿ, ಮಾ.5: ನಿಶಾನ್ ವರುಣ್ ಮೂವೀಸ್ ಬ್ಯಾನರ್‌ನಡಿ ತಯಾರಾಗಿರುವ ವಿಜಯ್ ಶೋಭರಾಜ್ ಪಾವೂರ್ ನಿರ್ದೇಶನದ ‘ಪೆಪ್ಪೆರೆರೆ ಪೆರೆರೆರೆ’ ತುಳು ಚಲಚನಚಿತ್ರ ಮಾ.7ರಂದು ಅಪರಾಹ್ನ 1:30ಕ್ಕೆ ನಮ್ಮ ಕುಡ್ಲ ಟಾಕೀಸ್ ಕೇಬಲ್ ಚಾನೆಲ್‌ನಲ್ಲಿ ತೆರೆ ಕಾಣಲಿದೆ.

ಮಾ.7ರಂದೇ ಪ್ರಾರಂಭಗೊಳ್ಳುವ ಮಂಗಳೂರಿನ ನಮ್ಮ ಕುಡ್ಲ ಟಾಕೀಸ್‌ನಲ್ಲಿ ಮೊದಲ ಚಿತ್ರವಾಗಿ ‘ಪೆಪ್ಪೆರೆರೆ ಪೆರೆರೆರೆ’ ಬಿಡುಗಡೆಗೊಳ್ಳಲಿದ್ದು, ಆ ದಿನ ಅಪರಾಹ್ನ 1:30ಕ್ಕೆ ಸಂಜೆ 6:00ಕ್ಕೆ ಹಾಗೂ ರಾತ್ರಿ 9:00ಕ್ಕೆ ಒಟ್ಟು ಮೂರು ಪ್ರದರ್ಶನವಿರುತ್ತದೆ. ಬಳಿಕ ಮಾರ್ಚ್ ತಿಂಗಳ ಪ್ರತಿ ರವಿವಾರ ಈ ಚಿತ್ರದ ಮೂರು ಪ್ರದರ್ಶನ ನಮ್ಮ ಕುಡ್ಲ ಟಾಕೀಸ್‌ನಲ್ಲಿ ಇರುತ್ತದೆ ಎಂದು ಮಲ್ನಾಡ್ ಇನ್ಫೋಟೆಕ್‌ನ ಸಿಇಒ ಹರೀಶ್ ಬಿ.ಕರ್ಕೇರಾ ಹಾಗೂ ನಮ್ಮ ಕುಡ್ಲ ಟಾಕೀಸ್‌ನ ಸಿಓಓ ನವನೀತ್ ಶೆಟ್ಟಿ ಕದ್ರಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ತುಳು ಸಿನಿಮಾಕ್ಕೆ ಮೀಸಲಾದ ನಮ್ಮ ಕುಡ್ಲ ಟಾಕೀಸ್ ಮೂಲಕ ಪ್ರತಿ ತಿಂಗಳು ಒಂದೊಂದು ಹೊಸ ತುಳು ಸಿನಿಮಾ ಪ್ರಸಾರಗೊಳ್ಳಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಕೇಬಲ್ ಮೂಲಕ ಈ ಚಿತ್ರಗಳನ್ನು ಮನೆ ಮಂದಿಯೆಲ್ಲಾ ಮನೆಯಲ್ಲೇ ಕುಳಿತು ವೀಕ್ಷ್ಷಿಸಬಹುದಾಗಿದೆ. ಇದಕ್ಕಾಗಿ ಕೇಬಲ್‌ಗೆ 120 ರೂ. ಹಾಗೂ ಎಚ್‌ಡಿ ಚಾನೆಲ್ ಬಯಸಿದರೆ 160 ರೂ.ವನ್ನು ಪ್ರತಿ ತಿಂಗಳು ನೀಡಬೇಕಾಗುತ್ತದೆ ಎಂದರು.

 ಒಮ್ಮೆ ನೀವು ಹಣ ನೀಡಿದರೆ ತಿಂಗಳಲ್ಲಿ 12 ಬಾರಿ ಸಿನಿಮಾವನ್ನು ವೀಕ್ಷಿಸಲು ಸಾಧ್ಯವಿದೆ. ಹೀಗೆ ಕೇಬಲ್ ಮೂಲಕ ಕರಾವಳಿಯ 3ರಿಂದ 5 ಲಕ್ಷ ಮಂದಿ ಸಿನಿಮಾ ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಹರೀಶ್ ಕರ್ಕೇರ ತಿಳಿಸಿದರು. ಮಾರ್ಚ್ ತಿಂಗಳ ಬಳಿಕ ಸಿನಿಮಾ ನಿರ್ಮಾಪಕರು ಚಿತ್ರವನ್ನು ಸಿನಿಮಾ ಮಂದಿರಗಳಲ್ಲಿ ಹಾಗೂ ಮಲ್ಚಿಫ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡಬಹುದಾಗಿದೆ ಎಂದು ನವನೀತ್ ಶೆಟ್ಟಿ ಕದ್ರಿ ತಿಳಿಸಿದರು.

ಹಾಸ್ಯಕ್ಕೆ ಒತ್ತು ನೀಡಲಾದ ‘ಪೆಪ್ಪೆರೆರೆ ಪೆರೆರೆರೆ’ ಚಿತ್ರದಲ್ಲಿ ತುಳು ಹಾಸ್ಯ ದಿಗ್ಗಜರಾದ ಅರವಿಂದ ಬೋಳಾರ್, ದೇವದಾಸ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು ಜೊತೆಗೆ ಉಮೇಶ್ ಮಿಜಾರ್, ಶಶಿರಾಜ್ ಕಾವೂರ್, ದಿನೇಶ್ ಕೋಡಪದವು, ಮೈತ್ರಿ ಕಶ್ಯಪ್, ಚೈತ್ರಾ ಶೆಟ್ಟಿ ಸುನೀತಾ ಎಕ್ಕೂರು ಮುಂತಾದವರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎ2ಎಸ್‌ನ ಅರ್ಜುನ್ ಕಾಪಿಕಾಡ್, ನಿರ್ಮಾಪಕ ನಿಶಾನ್ ಕೃಷ್ಣ ಭಂಡಾರಿ, ಕೇಬಲ್ ನೆಟ್‌ವರ್ಕ್‌ನ ಕಿರಣ್‌ಕುಮಾರ್, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News