ವ್ಯಕ್ತಿ ನಾಪತ್ತೆ

Update: 2021-03-05 15:08 GMT

ಉಡುಪಿ, ಮಾ.5: ಜಿಲ್ಲೆಯ ಮೂಡನಿಡಂಬೂರು ಗ್ರಾಮದ ಬನ್ನಂಜೆ ಟವರ್‌ನ ಪ್ಲಾಟ್‌ನಂ: 302ರಲ್ಲಿ ವಾಸವಿದ್ದ ಎಡ್ವರ್ಡ್ ಸೋನ್ಸ (56) ಎಂಬವರು ಮಾ.3ರಿಂದ ನಾಪತ್ತೆಯಾಗಿದ್ದಾರೆ.

ಚಹರೆ: 5 ಅಡಿ 7 ಇಂಚು ಎತ್ತರವಿದ್ದು, ದಪ್ಪ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದಾರೆ. ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News