ಬಂಗ್ರಕೂಳೂರು: ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಚಾಲನೆ

Update: 2021-03-06 06:48 GMT

ಮಂಗಳೂರು, ಮಾ.6: ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಮಾ.7ರವರೆಗೆ ನಡೆಯಲಿರುವ ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಲಾಗಿದೆ.

 ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಕೆ.ಚಿತ್ತರಂಜನ್ ಕಂಬಳ ಕರೆಗೆ ಗೌರವ ಸಲ್ಲಿಸಿ ದೀಪ ಬೆಳಗಿಸಿ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಮಾತನಾಡಿ, ಕಂಬಳವು ಕೃಷಿ ಸಂಸ್ಕೃತಿಯ ಭಾಗವಾಗಿ, ತುಳುನಾಡಿನ ಸಂಸ್ಕೃತಿಯ ಅಂಗವಾಗಿ ನಡೆದುಕೊಂಡು ಬರುತ್ತಿದೆ. ಮುಂದೆಯೂ ಈ ಸಂಸ್ಕೃತಿ ಉಳಿಯಬೇಕಾದರೆ ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಗ್ರಾಮೀಣ ಬದುಕಿನಲ್ಲಿ ಭತ್ತದ ಕೃಷಿ ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಕೃಷಿ ಸಂಸ್ಕೃತಿಯನ್ನು ನೆನಪಿಸುವ ಕಂಬಳ ಕ್ರೀಡೆ ಇಂದು ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಕಂಬಳ ಪೂರಕವಾಗಿದೆ. ನಮ್ಮ ಸಂಸ್ಕೃತಿಯ ಬೇರುಗಳೊಂದಿಗೆ ನಮ್ಮ ಸಂಬಂಧ ಮುಂದುವರಿಯಬೇಕಾದರೆ ಕಂಬಳದಂತಹ ಚಟುವಟಿಕೆ ನಿರಂತರವಾಗಿ ನಡೆಯಬೇಕಾಗಿದೆ ಎಂದರು.

ಕದ್ರಿ ಮಠದ ರಾಜಯೋಗಿ ನಿರ್ಮಲಾಥ್ ಮಹಾರಾಜ್, ಶ್ರೀ ರಾಮಕ್ರಷ್ಣ ಮಿಶನ್ ನ ಸ್ವಾಮೀಜಿ ಏಕಗಮ್ಯಾನಂದ ಸ್ವಾಮೀಜಿ, ವಜ್ರ ಕರ್ಣಾಂತಾಯ ಬಲ್ಲಾಳ್, ಜಯರಾಮ ಶೆಟ್ಟಿ ಕುಡುಂಬೂರು, ಮಾಜಿ ಶಾಸಕ ಮೋನಪ್ಪ ಭಂಡಾರಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮನಪಾ ಸದಸ್ಯ ಅನಿಲ್ ಕುಮಾರ್, ಅರಸು ಕುಂಜಜರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮುಕ್ಕಾಲ್ದಿ ಜಯರಾಮ, ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ, ಕಂಬಳ ಸಮಿತಿಯ ಸಂಚಾಲಕ ಕಿಶೋರ್ ಕುಮಾರ್ ಪುತ್ತೂರು, ಸಲಹೆಗಾರರಾದ ಪ್ರೊ.ಗುಣಪಾಲ ಕಡಂಬ, ಪಿ.ಆರ್.ಶೆಟ್ಟಿ, ವಿಜಯಕುಮಾರ್ ಕಂಗಿನ ಮನೆ ಮೊದಲಾದವರು ಉಪಸ್ಥಿತರಿದ್ದರು.

ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ ಸ್ವಾಗತಿಸಿದರು. ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬ್ರಿಜೇಶ್ ಶೆಟ್ಟಿ ಸ್ವಾಗತಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News