ಎ.ಜೆ. ಆಸ್ಪತ್ರೆಯಿಂದ ಪುತ್ತೂರಿನಲ್ಲಿ ಡಯಾಲಿಸಿಸ್ ಕೇಂದ್ರ ಆರಂಭ

Update: 2021-03-06 09:18 GMT

ಮಂಗಳೂರು, ಮಾ.6: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಪುತ್ತೂರು ರೋಟರಿ ಕ್ಲಬ್ ಸಹಯೋಗದಲ್ಲಿ ಬೊಳುವಾರಿನ ಮಹಾವೀರ ಮೆಡಿಕಲ್ ಸೆಂಟರ್ ಡಯಾಲಿಸಿಸ್ ಕೇಂದ್ರದಲ್ಲಿ ಡಯಾಲಿಸಿಸ್ ಸೇವೆ ಆರಂಭಿಸಿದೆ. ಈ ಡಯಾಲಿಸಿಸ್ ಕೇಂದ್ರವು ಫೆಬ್ರವರಿ 20ರಂದು ಕಾರ್ಯಾರಂಭಗೊಂಡಿದೆ. 

ಈ ಡಯಾಲಿಸಿಸ್ ಕೇಂದ್ರದಲ್ಲಿ ಎ.ಜೆ. ಆಸ್ಪತ್ರೆಯ ಅನುಭವಿ ತಂತ್ರಜ್ಞರು ಲಭ್ಯರಿದ್ದು, ಕನ್ಸಲ್ಟೆಂಟ್ ಕಿಡ್ನಿ ತಜ್ಞ ಡಾ.ಅಭಯನಾರಾಯಣ ಅವರ ನಿರಂತರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಿಸುತ್ತಿದೆ.

ಮೂತ್ರಪಿಂಡದ (ಕಿಡ್ನಿ) ವೈಫಲ್ಯದಿಂದ ಬಳಲುತ್ತಿರುವ ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಈ ಡಯಾಲಿಸಿಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 8904001125 ಅನ್ನು ಸಂಪರ್ಕಿಸುವಂತೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಮತ್ತು ಕಿಡ್ನಿ ಕಸಿ ತಜ್ಞರಾಗಿರುವ ಡಾ. ಪ್ರಶಾಂತ್ ಮಾರ್ಲ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News