ಪೆಟ್ರೋಲಿಯಂ ವ್ಯವಹಾರದಲ್ಲಿ ವಂಚನೆ: ದೂರು

Update: 2021-03-06 16:38 GMT

ಕಾರ್ಕಳ, ಮಾ. 6: ಪೆಟ್ರೋಲಿಯಂ ವ್ಯವಹಾರಕ್ಕೆ ಸಂಬಂಧಿಸಿ ಮುಂಬೈಯ ಕಂಪೆನಿಯು ಎರ್ಲಪಾಡಿ ಗ್ರಾಮದ ಜಾರ್ಕಳದ ರಮೇಶ್ ಶೆಟ್ಟಿ ಎಂಬವರಿಗೆ 15ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿ ನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಟ್ರೋಲಿಯಂ ಡಿಸೇಲ್ ಹಾಗೂ ಇತರ ಉತ್ಪನ್ನಗಳನ್ನು ದೇಶದಾದ್ಯಂತ ಪೆಟ್ರೋಲ್ ಪಂಪ್‌ಗಳ ಮೂಲಕ ಮಾರಾಟ ಮಾಡುವ ಮುಂಬೈಯ ಮೈ ಓನ್ ಇಕೊ ಎನರ್ಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯು ದೇಶದ ವಿವಿಧ ಪ್ರಾಂತ್ಯಗಳಿಂದ ಪೆಟ್ರೋಲಿಯಂ ಡಿಸೀಲ್ ಹಾಗೂ ಇತರ ಉತ್ಪನ್ನ ಗಳನ್ನು ಮಾರಾಟ ಮಾಡುವ ಬಗ್ಗೆ ಅರ್ಜಿಗಳನ್ನು ಅಹ್ವಾನಿಸಿತ್ತು.

ಅದರಂತೆ ರಮೇಶ್ ಶೆಟ್ಟಿ 2018ರ ಅ.15ರಂದು ಕಂಪೆನಿಯನ್ನು ಸಂಪರ್ಕಿಸಿ ಪೆಟ್ರೋಲಿಯಂ ವ್ಯವಹಾರವನ್ನು ಕಾರ್ಕಳ ಕಸಬ ಗ್ರಾಮದಲ್ಲಿ ಮಾಡುವುದಾಗಿ ಪ್ರಸ್ತಾಪವನ್ನು ನೀಡಿ ಬಳಿಕ ಭದ್ರತಾ ಠೇವಣಿಯಾಗಿ ಒಟ್ಟು 15ಲಕ್ಷ ಹಣವನ್ನು ಈ ಕಂಪೆನಿಗೆ ಪಾವತಿಸಿದ್ದರು. ಆದರೆ ಕಂಪೆನಿಯು ಕಾನೂನಿನ ವಿಧಾನಗಳನ್ನು ಪೂರೈಸುವ ಬದಲು ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಹಣವನ್ನು ಪಡೆದು ವಂಚನೆ ನಂಬಿಕೆ ದ್ರೋಹ ಹಾಗೂ ನಷ್ಟ ಉಂಟು ಮಾಡಿದೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News