ಉಳ್ಳಾಲ ಗ್ರಂಥಾಲಯ ಆಧುನೀಕರಣ, ಡಿಜಿಟಲೀಕರಣಗೊಳಿಸಲು ಶಾಸಕ, ನಗರಸಭೆ ಪೌರಾಯುಕ್ತರಿಗೆ ಮನವಿ

Update: 2021-03-06 16:52 GMT

ಉಳ್ಳಾಲ, ಫೆ.6: ಪುರಸಭೆ ಕಟ್ಟಡದ ಸಮೀಪವಿರುವ ಜಿಲ್ಲಾ ಗ್ರಂಥಾಲಯವು ಸುಮಾರು 4-5 ವರ್ಷಗಳಿಂದ ದುರವಸ್ಥೆಯಲ್ಲಿದ್ದು ಮಳೆಗಾಲದಲ್ಲಿ ಹಲವಾರು ಪುಸ್ತಕಗಳು ನಾಶವಾಗಿದೆ. ಹೀಗಾಗಿ ಗ್ರಂಥಾಲಯ ಆಧುನೀಕರಣಗೊಳಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ಶಾಸಕ ಯು.ಟಿ.ಖಾದರ್ ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತ ರಾಯಪ್ಪರವರಿಗೆ ಎಸ್ಸೆಸ್ಸೆಫ್, ಎಸ್.ವೈ.ಎಸ್ ಉಳ್ಳಾಲ ವತಿಯಿಂದ ಮನವಿ ಮಾಡಲಾಯಿತು.

ಗ್ರಂಥಾಲಯದಲ್ಲಿ ಓದುಗರಿಗೆ ಅಗತ್ಯವಾದ ಪ್ರಾಥಮಿಕ ಅವಶ್ಯಕತೆಯನ್ನು ಪೂರೈಸಲು ಬೇಕಾದ ವಾಶ್ ರೂಂ ವ್ಯವಸ್ಥೆ ಇಲ್ಲ. ಗ್ರಂಥಾಲಯದ ಡಿಜಿಟಲೀಕರಣಕ್ಕಾಗಿ ಬಂದಂತಹ ಎರಡು ಕಂಪ್ಯೂಟರ್ ಗಳನ್ನು ಇಡಲು ಬೇಕಾದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ನಗರಸಭಾ ವ್ಯಾಪ್ತಿಯ ಅಗತ್ಯತೆಗೆ  ಅನುಸಾರವಾದ ವಿಶಾಲ ಲೈಬ್ರರಿಯನ್ನು ನಿರ್ಮಿಸಲು ಹಾಗೂ ಆಧುನಿಕರಣಗೊಳಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಎಸ್.ವೈ.ಎಸ್ ನಾಯಕ ಹನೀಫ್ ಹಾಜಿ ಉಳ್ಳಾಲ, ಕೌನ್ಸಿಲರ್ ಅಶ್ರಫ್ ಮಾಸ್ತಿಕಟ್ಟೆ ಎಸ್.ವೈ.ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ, ಸದಸ್ಯರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಮೆಹರಲಿ ಪೇಟೆ, ಶಬೀರ್ ಪೇಟೆ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕಾರ್ಯದರ್ಶಿ ಮುಝಮ್ಮಿಲ್ ಮದನಿ, ಸದಸ್ಯರಾದ ಶಿಹಾಂ ಮುಕ್ಕಚ್ಚೇರಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಜಾಬಿರ್ ಫಾಲಿಲಿ, ಪ್ರಧಾನ ಕಾರ್ಯದರ್ಶಿ ಹಾಶಿರ್ ಕೋಡಿ, ಕೋಶಾಧಿಕಾರಿ ಹಾಫಿಲ್ ಮುಯೀನ್ ಅಂಜದಿ, ಸದಸ್ಯ ಇಮ್ರಾನ್ ಕೋಡಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News