ದಮಾಮ್ : ಐಎಫ್ಎಫ್ ನಾಯಕ, ಸಮಾಜ ಸೇವಕ ಅಬ್ದುಲ್ ವಾಹಿದ್ ನಿಧನಕ್ಕೆ ಸಂತಾಪ ಸಭೆ

Update: 2021-03-06 16:53 GMT

ದಮಾಮ್: ಇತ್ತೀಚೆಗೆ ನಿಧನರಾದ ಇಂಡಿಯಾ ಫ್ರೆಟರ್ನಿಟಿ‌ ಫೋರಂ‌ನ ನಾಯಕ ಮುಹಮ್ಮದ್ ಅಬ್ದುಲ್ ವಾಹಿದ್ ರಿಗೆ ಸಂತಾಪ ಸೂಚನೆಯ ಭಾಗವಾಗಿ ಸಂಘಟನೆ ವತಿಯಿಂದ ಇತ್ತೀಚೆಗೆ ಆನ್ ಲೈನ್ ಸಭೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ವಾಹಿದ್ ಜೀವನದಲ್ಲಿ ಪಾಲಿಸುತ್ತಿದ್ದ ಮೌಲ್ಯಾದರ್ಶಗಳನ್ನು ಕೊಂಡಾಡಿದರು. ಐ.ಎಫ್.ಎಫ್, ದಮಾಮ್ ಪ್ರಾಂತ್ಯ ಸಮಿತಿಯ  ಕಾರ್ಯದರ್ಶಿ ಅಬ್ದುಲ್‌ ಸಲಾಂ ಮಾಸ್ಟರ್  ಅಬ್ದುಲ್ ವಾಹಿದ್ ಸಾಮಾಜಿಕ ಬದುಕನ್ನು ಪರಿಚಯಿಸಿದರು.

ಸೌದಿ ಅರೇಬಿಯಾದಲ್ಲಿ ಅವರು ನಿರಂತರವಾಗಿ ಅನಿವಾಸಿ ಭಾರತಿಯರಿಗಾಗಿ ಸಾಮಾಜಿಕ ಚಟುವಟಿಕೆಗಗಳು ಮತ್ತು ಮಾನವೀಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.  ರಿಯಾದ್ ನಲ್ಲಿರುವ ಭಾರತಿಯ  ರಾಯಭಾರಿ ಕಚೇರಿಯ ಸಂಯೋಜನೆಯೊಂದಿಗೆ ಅನಿವಾಸಿ ಭಾರತೀಯ ಕಾರ್ಮಿಕರಿಗೆ ನೆರವಾಗುತ್ತಿದ್ದರು. ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದಲ್ಲಿ ವಿಶೇಷವಾಗಿ ಹೈದರಾಬಾದ್ ಸಮುದಾಯದ ಮಧ್ಯೆ ಅವರು ತಮ್ಮ ಸಾಮಾಜಿಕ ಚಟುವಟಿಕೆಗಳಿ ಗಾಗಿ ಹೆಸರು ವಾಸಿಯಾಗಿದ್ದರು. ಯುವ ಉದ್ಯಮಿಯಾಗಿ ಅವರು 1991ರಲ್ಲಿ ಹೈದರಾಬಾದ್ ನಲ್ಲಿ ಮಾವ್ಸ್ ಇನ್ ಫಾರ್ಮೇಶನ್ ಟೆಕ್ ಕಂಪೆನಿ ಯನ್ನು ಸ್ಥಾಪಿಸಿದ್ದರು ಮತ್ತು 1994ರ ತನಕ ಅದರ ವ್ಯವಸ್ಥಾಪನಾ ಪಾಲುದಾರನಾಗಿದ್ದರು.

ಸೌದೀಕರಣದ ಸಂದರ್ಭದಲ್ಲಿ ಭಾರತೀಯ ಅನಿವಾಸಿಗರು ತೀವ್ರ ಸಂಕಷ್ಟದಲ್ಲಿದ್ದಾಗ ಅವರ ಸಂಕಷ್ಟಗಳನ್ನು  ಪರಿಹರಿಸುವುದಕ್ಕಾಗಿ ಅವರು ಮಾಡಿದ ಪ್ರಯತ್ನಗಳು ವ್ಯಾಪಕ ಶ್ಲಾಘನೆಗೆ ಕಾರಣವಾಗಿತ್ತು. ಇಂಡಿಯಾ ಫ್ರೆಟರ್ನಿಟಿ ಫೋರಂ ಪರವಾಗಿ ಅವರು ಹಲವು ಕಾರ್ಮಿಕ ಶಿಬಿರಗಳಲ್ಲಿ ಆರೋಗ್ಯ, ಸುರಕ್ಷತೆ ಮತ್ತು ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇಂಡಿಯಾ ಫ್ರೆಟರ್ನಿಟಿ ಫೋರಂ ಮಾತ್ರವಲ್ಲದೆ  ಹೈದರಾಬಾದ್ ಅಸೋಸಿಯೇಶನ್, ಇಂಡಿಯಾ ಫೋರಂ ನಂತಹ ಇತರ ಸಂಘಟನೆಗಳಲ್ಲೂ ಕ್ರಿಯಾಶೀಲರಾಗಿದ್ದು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಒದಗಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಗೊಳಿಸುವುದು, ರಾಯಭಾರಿ ಸಂಬಂದಿ ಕೆಲಸಗಳಿಗೆ ಸ್ವಯಂಸೇವಕರನ್ನು ಸಿದ್ಧಗೊಳಿಸುವುದು ಕುಟುಂಬ ಸಮ್ಮಿಲನ ಕಾರ್ಯಕ್ರಮಗಳನ್ನು ವ್ಯವಸ್ಥೆಪಡಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಹಲವು ಸಂದರ್ಭದಲ್ಲಿ ಹಜ್ಜಾಜ್ ಗಳ ಸೇವೆಯಲ್ಲಿ ತೊಡಗಿಕೊಂಡಿದ್ದರು. ವಿವಿಧ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡಿದ್ದ ಕುರಿತ ಕಿರುಚಿತ್ರವನ್ನೂ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ಹದಿನೇಳು ವರ್ಷಗಳ ಕಾಲ ಪ್ರತಿಷ್ಠಿತ ಸೌದಿ ಅರಾಮ್ಕೊ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅವರು ಪ್ರಸುತ ಅದಾ ಕಂಪೆನಿ (ಸೌದಿ ಸರಕಾರದ ಸ್ವತಂತ್ರ ಅಂಗ)ಯಲ್ಲಿ ಉದ್ಯೋಗದಲ್ಲಿದ್ದರು. ವಾಹಿದ್ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತಿಯರನ್ನು ಅಗಲಿದ್ದಾರೆ.

ಕಾರ್ಯಕ್ರಮದಲ್ಲಿ ಅರಾಮ್ಕೊ ಮತ್ತು ರಿಯಾದ್ ನ ಅದಾ ಕಂಪೆನಿ ಪ್ರತಿನಿಧಿಗಳು, ರಾಯಭಾರಿ ಕಚೇರಿ ಸ್ವಯಂ ಸೇವಕ ಅಬ್ರಹಾಂ ವಲಿಯಾಕಲಾ, ಅಲಿಕುಟ್ಟಿ ಒಲವತ್ತೂರು, ಐಎಸ್ಎಫ್ ನಾಯಕ ಅಶ್ರಫ್ ಮೊರಾಯೂರ್, ಮನ್ಸೂರ್ ಷಾ, ಮುಹಮ್ಮದ್ ಬೇಗ್ ಮತ್ತು ಐಎಫ್ಎಫ್ ನ  ಮೂಸಕುಟ್ಟಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News