ತೆಂಕ ಎಡಪದವು ಗ್ರಾಮ ಅಭಿವೃಧ್ಧಿಗಾಗಿ 'ಗ್ರಾಮಾಭಿವೃದ್ಧಿ ಹೋರಾಟ ಸಮಿತಿ'ಯಿಂದ ಮನವಿ

Update: 2021-03-07 05:30 GMT

ಮಂಗಳೂರು, ಮಾ. 7: ತೆಂಕ ಎಡಪದವು ಗ್ರಾಮದ ಸಮಗ್ರ ಅಭಿವೃಧ್ಧಿ ಹಾಗೂ ಸಮರ್ಪಕ ವ್ಯವಸ್ಥೆಯನ್ನು ಬಯಸಿ "ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಎಡಪದವು" ಇದರ ಸದಸ್ಯರ ನಿಯೋಗ ಪಂಚಾಯತ್ ಅಭಿವೃಧ್ಧಿ ಅಧಿಕಾರಿ (P.D.O.)ಹಾಗೂ ಪಂಚಾಯತ್ ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ತೆಂಕ ಎಡಪದವು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದ್ದು, ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಗ್ರಾಮದಲ್ಲಿ ಅನಧಿಕೃತ ಕಟೌಟ್‌ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಎಲ್ಲಾ ಅನಧಿಕೃತ ಕಟೌಟ್‌ಗಳನ್ನು ತೆರವುಗೊಳಿಸಬೇಕು. ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಮಾತ್ರವಲ್ಲದೆ ಜಾನುವಾರುಗಳ ಜೀವಕ್ಕೂ ಅಪಾಯವಿದೆ‌ ಆದುದರಿಂದ ಶುಚಿತ್ವಕ್ಕೆ ಮಾನ್ಯತೆಯನ್ನು ನೀಡಿ ಗ್ರಾಮದಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು. ತೆಂಕ ಎಡಪದವು ಗ್ರಾಮದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದೇ ಇರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥಿತ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಬೇಕು‌. ಗ್ರಾಮದಲ್ಲಿ ಸ್ಮಶಾನ ಇದ್ದರೂ ಸಮರ್ಪಕವಾಗಿರದೇ ಇರುವುದರಿಂದ ಉಪಯೋಗ ಯೋಗ್ಯವಾದ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು. ಗ್ರಾಮದ ಜನವಸತಿ ಪ್ರದೇಶದಲ್ಲಿರು‌ವ ಹಂದಿ ಸಾಕಣೆ ಫಾರ್ಮಾ‌ನಿಂದ ಪರಿಸರದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಇರದ ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕೂಡಲೇ ಈ ಫಾರ್ಮ‌ನ್ನು ತೆರವುಗೊಳಿಸಬೇಕು ಎಂದು ಸಮಿತಿಯ ಸದಸ್ಯರು ಮನವಿಯಲ್ಲಿ ಒತ್ತಾಯ ಮಾಡಿದರು.

ಈ ಸಂದರ್ಭ ಗ್ರಾಮಾಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ.ಎಂ. ರಫೀಕ್, ಉಪಾಧ್ಯಕ್ಷರಾದ ಚಂದ್ರಶೇಖರ ಎಸ್., ಪ್ರಧಾನ ಕಾರ್ಯದರ್ಶಿ ಮುನೀರ್ ಪದ್ರೆಂಗಿ,  ಜೊತೆ ಕಾರ್ಯದರ್ಶಿಗಳಾದ ನವೀನ್ ಎಸ್., ಉದಯ ಕುಮಾರ್, ಸದಸ್ಯರಾದ ಎನ್.ಎಂ‌. ಅಬ್ದುಲ್ ಖಾದರ್, ಉಬೈದುಲ್ಲಾ, ಜೋಸೆಫ್, ಶೇಕಬ್ಬ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News