ಕಮರುನ್ನಿಸ ಅಸದಿಗೆ ಪಿಎಚ್ ಡಿ ಪದವಿ

Update: 2021-03-07 07:17 GMT

ಕೊಣಾಜೆ : ಹಳೆಯಂಗಡಿ ತೋಕೂರು ನಿವಾಸಿ ಕಮರುನ್ನಿಸ ಅಸದಿ ಅವರು `ಚೇಂಜಿಂಗ್ ಐಡೆಂಟಿಟೀಸ್ ಆಫ್ ಮುಸ್ಲಿಂ ವುಮೆನ್ : ಎ ಸೋಶಿಯಲಾಜಿಕಲ್ ಸ್ಟಡಿ ಇನ್ ದಕ್ಷಿಣಕನ್ನಡ' ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ.

ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವಿನಯ್ ರಜತ್ ಅವರು ಮಾರ್ಗದರ್ಶನ ನೀಡಿದ್ದರು. ಇವರು ಹಳೆಯಂಗಡಿ ನಿವೃತ್ತ ಪಂಚಾಯಿತಿ ಕಾರ್ಯದರ್ಶಿ ಎಚ್.ಎಂ.ಶಫಿ ಅಸದಿ ಮತ್ತು ಸೈದುನ್ನಿಸ ಅಸದಿ ದಂಪತಿಯ ಪುತ್ರಿಯಾಗಿದ್ದು, ಖಾಲಿದ್ ಅಹ್ಮದ್ ಅವರ ಪತ್ನಿಯಾಗಿದ್ದಾರೆ. ಕಮರುನ್ನಿಸ ಅಸದಿ ಅವರು ಹಳೆಯಂಗಡಿ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಲ್ಕಿ ವಿಜಯ ಕಾಲೇಜು, ಉಳ್ಳಾಲ ಟಿಪ್ಪು ಸುಲ್ತಾನ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಪಸ್ತುತ ದೇರಳಕಟ್ಟೆ ಕಣಚೂರು ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News